ನೂರಾರು ಜನರು ನೋಡುನೋಡುತ್ತಿದ್ದಂತೆಯೇ ಸಮುದ್ರಕ್ಕೆ ಬಿತ್ತು ಹೆಲಿಕಾಪ್ಟರ್…! 20-02-2022 12:37PM IST / No Comments / Posted In: Latest News, Live News, International ಅಮೆರಿಕ ಫ್ಲೋರಿಡಾದ ಮಿಯಾಮಿ ಬೀಚ್ನಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಶನಿವಾರ ಮಿಯಾಮಿ ಬೀಚ್ ಬಳಿಯ ಅಟ್ಲಾಂಟಿಕ್ ಸಾಗರದಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಮಧ್ಯಾಹ್ನ 1:10ಕ್ಕೆ, 10 ನೇ ಸ್ಟ್ರೀಟ್ ಬಳಿ ಸಮುದ್ರದಲ್ಲಿ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮಿಯಾಮಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅವರು ಮಿಯಾಮಿ ಬೀಚ್ನ ಅಗ್ನಿಶಾಮಕ ತಂಡದ ಜೊತೆಗೂಡಿ ಹೆಲಿಕಾಪ್ಟರ್ ನಲ್ಲಿದ್ದವರನ್ನ ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ, ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಜಾಕ್ಸನ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಡಲತೀರದಿಂದ 50 ಗಜ ದೂರದಲ್ಲಿ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು, ಪ್ರಯಾಣದ ನಡುವೆ ಹೆಲಿಕಾಪ್ಟರ್ ಎಂಜಿನ್ ಪವರ್ ಕಳೆದುಕೊಂಡಿದೆ. ಈ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ವಿಡಿಯೋ ಕೂಡ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಮೇರಿ ಶಿಯಾವೋ ತಿಳಿಸಿದ್ದಾರೆ. Two rescued after helicopter crashes in ocean near Miami Beach, Florida Srinjoy with more on the story.#MiamiBeach #WorldNews pic.twitter.com/aVdeR5Q9IM — TIMES NOW (@TimesNow) February 20, 2022