ಹಂದಿಯಂತಹ ದೇಹವನ್ನು ಹೊಂದಿರುವ ಎರಡು ತಲೆಯ ಕರುವೊಂದು ಜನಿಸಿರುವ ವಿಚಿತ್ರ ಘಟನೆ ರಷ್ಯಾದಲ್ಲಿ ನಡೆದಿದೆ. ಹಸುವಿಗೆ ಜನಿಸಿರುವ ಕರುವು ಹಂದಿಯನ್ನು ಹೋಲುತ್ತದೆ.
ರಷ್ಯಾದ ಖಕಾಸ್ಸಿಯಾದ ಮಟ್ಕೆಚಿಕ್ ಗ್ರಾಮದಲ್ಲಿ ಈ ವಿಚಿತ್ರ ಕರು ಜನಿಸಿದೆ. ಆದರೆ ಜನಿಸಿದ ಕೆಲಹೊತ್ತಲೇ ಇದು ಮೃತಪಟ್ಟಿದೆ. ಅಲ್ಲದೆ ಕೆಲವು ದಿನಗಳ ನಂತರ ಅದರ ತಾಯಿ ಹಸುವೂ ಮೃತಪಟ್ಟಿದೆ.
ತಂದೆ ಅಂತ್ಯಕ್ರಿಯೆಯಲ್ಲಿ ಮಾಡೆಲ್ ಫೋಟೋಶೂಟ್: ಸಿಟ್ಟಿಗೆದ್ದ ನೆಟ್ಟಿಗರಿಂದ ಛೀಮಾರಿ
ಕಳೆದ ತಿಂಗಳು ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಪುರ ಸಿಕ್ರೌಡಾ ಗ್ರಾಮದಲ್ಲಿ ಎಮ್ಮೆಯೊಂದು ಅಪರೂಪದ ಎರಡು ತಲೆಯ ಕರುವಿಗೆ ಜನ್ಮ ನೀಡಿತ್ತು. ನವಜಾತ ಕರು ಎರಡು ಕುತ್ತಿಗೆ, ಎರಡು ಬಾಯಿ, ನಾಲ್ಕು ಕಣ್ಣು ಮತ್ತು ನಾಲ್ಕು ಕಿವಿಗಳನ್ನು ಹೊಂದಿತ್ತು. ಕರು ಆರೋಗ್ಯವಾಗಿದೆ ಎಂದು ಪಶುವೈದ್ಯರು ಮಾಹಿತಿ ನೀಡಿದ್ದರು.
ಪ್ರಾಣಿಗಳು ಆನುವಂಶಿಕ ಅಸಹಜತೆಗಳೊಂದಿಗೆ (ಮ್ಯುಟೇಶನ್ಗಳು) ಜನಿಸುವುದಕ್ಕೆ ಮುಖ್ಯ ಕಾರಣ ಜೀನೋಮ್ನಲ್ಲಿನ ಬದಲಾವಣೆ. ಪ್ರಾಣಿಗಳಲ್ಲಿನ ರೂಪಾಂತರಗಳಿಗೆ ಕಾರಣಗಳು ಅವುಗಳ ಬಾಹ್ಯ ಮತ್ತು ಆಂತರಿಕ ಪರಿಸರದಿಂದ ಉಂಟಾಗುತ್ತವೆ ಎಂದು ಹೇಳಲಾಗಿದೆ.