ಆಶಿಶ್ ಮತ್ತು ಸುಭಾಷ್ ಮಣ್ಣಿನ ಅಗತ್ಯವಿಲ್ಲದ ಏರೋಪೋನಿಕ್ಸ್ ಪದ್ಧತಿ ಬಳಸಿದರು. ಏರೋಪೋನಿಕ್ಸ್ ಕೇಸರಿ ಕೃಷಿಗೆ ಮುಖ್ಯ ಅವಶ್ಯಕತೆಗಳೆಂದರೆ ಕೋಲ್ಡ್ ಸ್ಟೋರೇಜ್ ರೂಮ್, ಗಾಳಿ, ತೇವಾಂಶ ಮತ್ತು ರಂಧ್ರಗಳಿರುವ ಮರದ ಟ್ರೇಗಳು. ಈ ಪ್ರಕ್ರಿಯೆಯ ಉದ್ದಕ್ಕೂ, ಬೀಜ ನೆಡುವಿಕೆಯಿಂದ ಕೊಯ್ಲು ಮಾಡುವವರೆಗೆ, ಏರೋಪೋನಿಕ್ಸ್ ನಲ್ಲಿ ಬೆಳಕು, ನೀರು ಮತ್ತು ತಾಪಮಾನದಂತಹ ಅಂಶಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸಲಾಗುತ್ತದೆ. 10 ಅಡಿ X 15 ಅಡಿ ಜಾಗದಲ್ಲಿ ಇದನ್ನು ಆರಂಭಿಸಲು ಪ್ರಾಥಮಿಕ ಹೂಡಿಕೆ ಸುಮಾರು 3 ಲಕ್ಷದಿಂದ 4 ಲಕ್ಷ ರೂ. ಆಗುತ್ತದೆ.
“ಒಮ್ಮೆ ನಾವು ಬೀಜ ಹಾಕಿದರೆ, ಅವು 15-20 ದಿನಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಕೇಸರಿ ಹೂ ಬಿಡುವಿಕೆಗೆ ಹೊಂದುವಂತೆ ತಾಪಮಾನವು 17 ಮತ್ತು 25 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಮೊದಲ ದಿನದಿಂದ 50 ದಿನಗಳಲ್ಲಿ ಹೂವು ಪ್ರಾರಂಭವಾಗುತ್ತದೆ ಮತ್ತು ನಂತರ ನಾವು ಕಟಾವು ಪ್ರಾರಂಭಿಸಬೇಕು” ಎಂದು ಸುಭಾಷ್ ಹೇಳುತ್ತಾರೆ.
ಕೇಸರಿ ಹೂ ಬಿಡುವಿಕೆಯು ಪ್ರಾರಂಭದಿಂದ ಸುಮಾರು 90 ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ದೊಡ್ಡ ಗಾತ್ರದ ಹೂವುಗಳು ಕೊನೆಯವರೆಗೂ ಅರಳುತ್ತವೆ ಎಂದು ಆಶಿಶ್ ಹೇಳುತ್ತಾರೆ.
ಕೇಸರಿ ಹೂವುಗಳ ದೊಡ್ಡ ಕಡ್ಡಿಯಂತಹ ಭಾಗವನ್ನು ತೆಗೆದು ಒಣಗಿಸಲಾಗುತ್ತದೆ ನಂತರ ಅದು ಕೇಸರಿ ಎಳೆಗಳಾಗಿ ಬದಲಾಗುತ್ತದೆ. ಸಾಂಪ್ರದಾಯಿಕ ಮಣ್ಣಿನ ಕೃಷಿಯಲ್ಲಿ ತೊಡಗಿಸುವ ಸಮಯ ಮತ್ತು ಹೆಚ್ಚಿನ ಶ್ರಮದಾಯಕ ಪ್ರಕ್ರಿಯೆಯಿಂದಾಗಿ ಕೇಸರಿ ವಿಶ್ವದ ಅತ್ಯಂತ ದುಬಾರಿ ಮಸಾಲೆಯಾಗಿದೆ.
ಈ ವರ್ಷದ ಆರಂಭದಲ್ಲಿ ಸುಭಾಷ್ ಮತ್ತು ಆಶಿಶ್ ಕೇಸರಿಯ ಮೊದಲ ಬೆಳೆಯನ್ನು ಮಾರಾಟಕ್ಕೆ ಕೊಯ್ಲು ಮಾಡಿದರು. “500 ಕೆಜಿ ಬೀಜಗಳಿಂದ ನಮಗೆ 1 ಕೆಜಿ ಕೇಸರಿ ಸಿಕ್ಕಿತು. ಉತ್ತಮ ಗುಣಮಟ್ಟದ ಕೇಸರಿಯನ್ನು ಪ್ರತಿ ಗ್ರಾಂಗೆ 900 ರೂ.ಗೆ ಮಾರಾಟ ಮಾಡಿ 9 ಲಕ್ಷ ರೂ.ಗಳಿಸಿದ್ದೇವೆ. ನಾವು ಅದನ್ನು ಆಯುರ್ವೇದ ಕಂಪನಿಗಳು, ಸೌಂದರ್ಯವರ್ಧಕ ಕಂಪನಿಗಳು ಮತ್ತು ಇತರ ಚಿಲ್ಲರೆ ಖರೀದಿದಾರರಿಗೆ ಮಾರಾಟ ಮಾಡಿದ್ದೇವೆ ಎಂದು ಸುಭಾಷ್ ಹೇಳುತ್ತಾರೆ.
ಈ ಯುವಕರು ಕೇಸರಿ ಮರಾಟದ ಜೊತೆಗೆ ಬೀಜಗಳನ್ನೂ ಮಾರಾಟ ಮಾಡುತ್ತಾರೆ. ನಾವು ಬೀಜಗಳನ್ನು ಕೆಜಿಗೆ 800 ರೂ.ಗೆ ಮಾರಾಟ ಮಾಡುತ್ತೇವೆ. ನಾವು ಏರೋಪೋನಿಕ್ಸ್ ಅನ್ನು ಬಳಸಿಕೊಂಡು ಒಳಾಂಗಣ ಕೇಸರಿ ಕೃಷಿಯಲ್ಲಿ ತರಬೇತಿಯನ್ನು ನೀಡುತ್ತಿದ್ದು ಗುಜರಾತ್‌ನಾದ್ಯಂತ ಜನರು, ವಿಶೇಷವಾಗಿ ಗ್ರಾಮೀಣ ಯುವಕರು ತರಬೇತಿಗೆ ಹಾಜರಾಗುತ್ತಾರೆ ”ಎಂದರು.
ಕಾಶ್ಮೀರಿ ಕೇಸರಿಯು ಅದರ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ ಮತ್ತು ಅದರ ವಿಶಿಷ್ಟ ಸ್ಥಾನಮಾನವನ್ನು ರಕ್ಷಿಸಲು 2020 ರಲ್ಲಿ ಭೌಗೋಳಿಕ ಸೂಚಕ (GI) ಟ್ಯಾಗ್ ಅನ್ನು ನೀಡಲಾಯಿತು.
ಆದಾಗ್ಯೂ, ಹವಾಮಾನ ಬದಲಾವಣೆ ಮತ್ತು ಇತರ ಅಂಶಗಳಿಂದಾಗಿ, ಕಾಶ್ಮೀರದಲ್ಲಿ ಕೇಸರಿ ಉತ್ಪಾದನೆಯು 2010-11ರಲ್ಲಿ ಎಂಟು ಟನ್‌ಗಳಿಂದ 2023-24ರಲ್ಲಿ 2.6 ಟನ್‌ಗಳಿಗೆ ಇಳಿದಿದೆ, ಇದು 67.5 ರಷ್ಟು ಭಾರಿ ಇಳಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.