ಆಸ್ಟ್ರೇಲಿಯಾದಲ್ಲಿ ವಿಮಾನ ಪತವಾಗಿದ್ದು, ಇಬ್ಬರು ಮಕ್ಕಳು, ಪೈಲಟ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಈ ಘಟನೆ ನಡೆದಿದೆ. ವಿಮಾನವು ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ ಮೂವರು ಸೇರಿದಂತೆ ಓರ್ವ ಪೈಲಟ್ ಇದ್ದರು ಎಂದು ಪೊಲೀಸರು ಹೇಳಿದ್ದಾರೆ.
ವಿಮಾನದಲ್ಲಿ ಇವರು ಜಾಯ್ ರೈಡ್ ಗೆ ತೆರಳಿದ್ದರು. ವಿಮಾನವು ಟೇಕ್ ಆಫ್ ಆಗುತ್ತಿದ್ದಂತೆ ಬ್ರಿಸ್ಬೇನ್ ನ ಈಶಾನ್ಯಕ್ಕೆ ಜೌಗು ಪ್ರದೇಶದಲ್ಲಿ ಇಳಿದಿದೆ. ಇದು ಮೊರೆಟನ್ ಕೊಲ್ಲಿಯಲ್ಲಿ ತೇಲುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ; ಬಾಲಕ ಸಾವು
ಸಾವನ್ನಪ್ಪಿದವರು ಒಂದೇ ಕುಟುಂಬದವರು ಎನ್ನಲಾಗಿದೆ. ಸದ್ಯ ಮೃತದೇಹ ಪತ್ತೆ ಹಚ್ಚಲಾಗುತ್ತಿದೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.