ಬೆಂಗಳೂರು : ಚಲಿಸುತ್ತಿದ್ದ ರೈಲಿನಿಂದ (Running train) ಬಿದ್ದು ಇಬ್ಬರು ಬೌದ್ದ ಬಿಕ್ಕು(Buddhist monk) ಗಳ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರು ಉತ್ತರದ ಬೆತ್ತನಗರಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇಬ್ಬರು ಬೌದ್ಧ ಬಿಕ್ಷುಗಳ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಕುಶಾಲನಗರದಿಂದ ಗೋಲ್ಡನ್ ಟೆಂಪಲ್ ನಿಂದ ವಾಪಸ್ ಬರುತ್ತಿದ್ದ ವೇಳೆ ರೈಲಿನ ಬಾಗಿಲ ಬಳಿ ಕುಳಿದ್ದ ವೇಳೆ ಆಯತಪ್ಪಿ ಸುಮಾರು 25 ವರ್ಷದ ಬೌದ್ಧ ಬಿಕ್ಕುಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಟ್ರ್ಯಾಕ್ ಮ್ಯಾನ್ ನಿಂದ ಬೌದ್ಧ ಬಿಕ್ಕುಗಳ ಸಾವು ಪ್ರಕರಣ ಬೆಳಕಿಗೆ ಬಂದಿದೆ.