alex Certify ದಿನದ ಮಟ್ಟಿಗೆ ಡಿಸಿಪಿಯಾದ ಮಕ್ಕಳು; ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಬಾಲಕರ ಕನಸನ್ನು ನನಸು ಮಾಡಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನದ ಮಟ್ಟಿಗೆ ಡಿಸಿಪಿಯಾದ ಮಕ್ಕಳು; ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಬಾಲಕರ ಕನಸನ್ನು ನನಸು ಮಾಡಿದ ಪೊಲೀಸರು

ಇದೊಂದು ಹೃದಯ ತಟ್ಟುವ ಪ್ರಸಂಗ. ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ಇಬ್ಬರು ಬಾಲಕರ ಕನಸನ್ನು ಬೆಂಗಳೂರು ಪೊಲೀಸರು ನನಸು ಮಾಡಿದ್ದಾರೆ.

ಕೇರಳದ ಮೊಹಮ್ಮದ್​ ಸಲ್ಮಾನ್​ ಮತ್ತು ಬೆಂಗಳೂರಿನ ಮಿಥಿಲೇಶ್​ ಕ್ಯಾನ್ಸರ್​ನಿಂದ ತೀವ್ರ ಅಸ್ವಸ್ಥರಾಗಿದ್ದು, ಹೋರಾಡುತ್ತಿದ್ದಾರೆ. ಅವರಿಗೋ ಭವಿಷ್ಯದಲ್ಲಿ ಪೊಲೀಸ್​ ಅಧಿಕಾರಿಗಳಾಗುವ ಕನಸು. ಆ ಕನಸನ್ನು ಒಂದು ದಿನದ ಮಟ್ಟಿಗಾದರೂ ಪೂರೈಸಲು ಪೊಲೀಸರು ನಿರ್ಧರಿಸಿದರು.

ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಅವರನ್ನು ಕೆಲವು ಗಂಟೆಗಳ ಕಾಲ ಡಿಸಿಪಿ (ಉಪ ಪೊಲೀಸ್​ ಆಯುಕ್ತರು) ಮಾಡಿದರು. ಚಿಕ್ಕ ಹುಡುಗರೂ ಸಮವಸ್ತ್ರ ಧರಿಸಿ ಡಿಸಿಪಿ ಕಚೇರಿಯಲ್ಲೇ ಕುಳಿತಿದ್ದರು.

ಆಗ್ನೇಯ ವಿಭಾಗದ ಉಪ ಪೊಲೀಸ್​ ಆಯುಕ್ತ ಸಿಕೆ ಬಾಬಾ ಅವರು ಟ್ವಿಟ್ಟರ್​ನಲ್ಲಿ ಈ ಪ್ರಸಂಗದ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ. ಕಠಿಣ ಕಾಯಿಲೆಯ ವಿರುದ್ಧ ಹೋರಾಡುವ ಧೈರ್ಯಶಾಲಿ ಮಕ್ಕಳ ಆಸೆಯನ್ನು ಈಡೇರಿಸುವಲ್ಲಿ ನಾವು ಸಣ್ಣ ಪಾತ್ರವನ್ನು ವಹಿಸಿದ್ದೇವೆ ಎಂದು ಒಕ್ಕಣೆ ಬರೆದಿದ್ದಾರೆ.

ಐಪಿಎಸ್​ ಅಧಿಕಾರಿ ಸಿ.ಕೆ. ಬಾಬಾ ಅವರ ಪೋಸ್ಟ್​ ನೆಟ್ಟಿಗರ ಗಮನ ಸೆಳೆದಿದೆ ಎಂದು ಹೇಳಬೇಕಾಗಿಲ್ಲ. ಹಾಗೆಯೇ ನೆಟ್ಟಿಗರು ಪೊಲೀಸ್​ ಇಲಾಖೆಯ ಗೆಶ್ಚರ್​ ಮೆಚ್ಚಿದರು.

ಮಾನವೀಯತೆಯು ನಾವು ಹೊಂದಿರುವ ಯಾವುದೇ ಸ್ಥಾನಕ್ಕಿಂತ ಮೇಲಿದೆ. ಸಮಾಜದ ಕಡೆಗೆ ನಿಮ್ಮ ಮಹತ್ತರವಾದ ಕೆಲಸಕ್ಕಾಗಿ ಅಭಿನಂದನೆಗಳು ಎಂದು ಒಬ್ಬ ಟ್ವೀಟಿಗರು ಶ್ಲಾಘಿಸಿದ್ದಾರೆ. “ಹ್ಯಾಟ್ಸ್​ ಆಫ್​ ಸರ್​, ಎಂಥ ಅದ್ಭುತ ಕೆಲಸ’ ಎಂದು ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...