
ಹೌದು, ಚಂಡಮಾರುತದಲ್ಲಿ ಎರಡು ಪಕ್ಷಿಗಳು ಪರಸ್ಪರ ರಕ್ಷಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಚಂಡಮಾರುತದ ಸಮಯದಲ್ಲಿ ಎರಡು ಪಕ್ಷಿಗಳು ತಂತಿಯ ಮೇಲೆ ಕುಳಿತಿರುವುದನ್ನು ನೋಡಬಹುದು. ಅದರಲ್ಲಿ ಅತ್ಯಂತ ಹೃದಯಸ್ಪರ್ಶಿ ಸಂಗತಿಯೆಂದರೆ ಎರಡೂ ಹಕ್ಕಿಗಳ ಪರಸ್ಪರ ಒಂದನೊಂದು ಹೇಗೆ ರಕ್ಷಿಸಿಕೊಳ್ಳುತ್ತಿತ್ತು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಒಂದು ಹಕ್ಕಿ ತನ್ನ ಸಂಗಾತಿ ಒದ್ದೆಯಾಗಬಾರದು ಎಂದು ರೆಕ್ಕೆ ಹಿಡಿದ್ರೆ, ಇನ್ನೊಂದು ಹಕ್ಕಿ ಕೂಡ ಹಾಗೆ ಮಾಡುತ್ತಿತ್ತು.
ಜೀವನದಲ್ಲಿ ಎಷ್ಟೇ ಚಂಡಮಾರುತಗಳು ಬಂದರೂ, ನಿಜವಾಗಿಯೂ ತಮ್ಮವರೇ ಆದವರು, ಒಟ್ಟಿಗೆ ಬಲವಾಗಿ ನಿಲ್ಲುತ್ತಾರೆ ಎಂದು ಪೋಸ್ಟ್ ಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸಹಜವಾಗಿ ನೆಟ್ಟಿಗರ ಹೃದಯ ಗೆದ್ದಿದೆ. ಪ್ರಕೃತಿಯಿಂದ ಕಲಿಯಲು ತುಂಬಾ ಇದೆ ಅಂತಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
