
ಕಸದ ವಿಚಾರಕ್ಕೋ, ಕುಡಿಯುವ ನೀರಿನ ವಿಷಯದಲ್ಲೋ ಬೀದಿ ಕಾಳಗ ಹಿಂದೆಲ್ಲ ಸಾಮಾನ್ಯವಾಗಿತ್ತು. ಇತ್ತೀಚೆಗೆ ಇಂತಹ ಪ್ರಸಂಗ ಕಡಿಮೆ ಎಂದೇ ಹೇಳಬಹುದು. ಆದರೆ ಅಲ್ಲೊಂದು ಇಲ್ಲೊಂದು ಘಟನೆ ನಡೆಯುತ್ತಲೇ ಇರುತ್ತದೆ. ಇದೀಗ ಆಂಟಿಯರಿಬ್ಬರ ನಡುವಿನ ಬೀದಿ ಕಾಳಗದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರ ನಡುವಿನ ಹೊಡೆದಾಟವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊವನ್ನು ಇನ್ಸ್ಟಾಗ್ರಾಮ್ನ ಮೀಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಮನೆಯ ಕಡೆಗೆ ಕಸವನ್ನು ಗುಡಿಸುತ್ತಿರುವಾಗ, ಆಕೆ ಕೂಡ ಅದೇ ರೀತಿ ಮಾಡಲು ಪ್ರಾರಂಭಿಸುತ್ತಾಳೆ ಮತ್ತು ಆ ವಿಷಯವಾಗಿ ಜಗಳವಾಡುತ್ತಾರೆ. ಇಬ್ಬರೂ ಕೋಪದಿಂದ ತಮ್ಮ ಪೊರಕೆಗಳಿಂದ ಕಸವನ್ನು ಪ್ರತಿಯೊಬ್ಬರ ಕಡೆಗೆ ಎಸೆಯುತ್ತಾರೆ. ಒಬ್ಬ ವಯಸ್ಸಾದ ಮಹಿಳೆ ಅವರ ಜಗಳ ನಿಲ್ಲಿಸಲು ಪ್ರಯತ್ನಿಸಿದಾಗ ಅವರನ್ನು ಪರಸ್ಪರ ದೂರ ತಳ್ಳುತ್ತಾಳೆ.
ಮಹಿಳೆಯರು ಜಗಳವನ್ನು ಮುಂದುವರೆಸಿ ಕಪ್ಪು ಚರಂಡಿಯ ಹೊಲಸು ನೀರನ್ನು ಕೈಯಲ್ಲಿ ಎತ್ತಿ ಪರಸ್ಪರ ಎರಚಲು ಪ್ರಾರಂಭಿಸುತ್ತಾರೆ. ಈ ಇಬ್ಬರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ಜಗಳ ಹೋರಾಟ ನಡೆಸುತ್ತಾರೆ. ಈ ವಿಡಿಯೊ ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ನೆಟ್ಟಿಗರು ರಂಜನೀಯ ವಿಡಿಯೋಗೆ ಕಾಮೆಂಟ್ ಮಾಡಿ ಖುಷಿಪಟ್ಟಿದ್ದಾರೆ.