ನವದೆಹಲಿ: ಭಾರತದ ನಿಯಮ ಪಾಲಿಸುವ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ಜಟಾಪಟಿ ಮುಂದುವರೆದಿದೆ.
ಭಾರತದ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯ ತೋರುತ್ತಿರುವ ಟ್ವಿಟರ್, ಗಣ್ಯರ ಖಾತೆಗಳನ್ನು ಕೆಲಸಮಯ ಸ್ಥಗಿತಗೊಳಿಸಿದ್ದು, ಇದರ ಮುಂದುವರೆದ ಭಾಗವಾಗಿ ಈಗ ಭಾರತದ ಭೂಪಟವನ್ನೇ ಬದಲಾವಣೆ ಮಾಡಿದೆ.
ಟ್ವಿಟರ್ ಪ್ರಕಟಿಸಿದ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಬೇರೆ ಮಾಡಲಾಗಿದೆ. ದೇಶದ ಅವಿಭಾಜ್ಯ ಅಂಗಗಳಾದ ಇವೆರಡು ಪ್ರದೇಶಗಳನ್ನು ಪ್ರತ್ಯೇಕವೆಂದು ಭೂಪಟದಲ್ಲಿ ತೋರಿಸಲಾಗಿದೆ. ಈ ರೀತಿ ಉದ್ದಟತನ ತೋರಿದ ಟ್ವಿಟರ್ ವಿರುದ್ಧ ದೇಶವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.