ʼಸಮೋಸಾʼ ಮೇಲಿದ್ದ ಕೋಡ್ ಸಂಖ್ಯೆ ಹಿಂದಿನ ರಹಸ್ಯ ಬಿಚ್ಚಿಟ್ಟ ಗ್ರಾಹಕರು 04-09-2021 5:00PM IST / No Comments / Posted In: Latest News, India, Live News ಸಮೋಸಾ ಅಂದರೆ ಸಾಕು ಬಹುತೇಕರ ಬಾಯಲ್ಲಿ ನೀರೂರುತ್ತದೆ. ಆದರೆ ಹೋಟೆಲ್ನಲ್ಲಿ ನೀವು ಖರೀದಿ ಮಾಡಿದ ಸಮೋಸಾಗಳ ಮೇಲೆ ಕ್ರಮ ಸಂಖ್ಯೆಗಳು ಇರೋದನ್ನು ಎಂದಾದರೂ ಕಂಡಿದ್ದೀರೇ..? ಟ್ವಿಟರ್ ಬಳಕೆದಾರ ನಿತಿನ್ ಮಿಶ್ರಾ ಎಂಬವರು ಸಮೋಸಾ ಕುರಿತಂತೆ ಹೊಸದೊಂದು ಅನ್ವೇಷಣೆಯನ್ನು ಮಾಡಿದ್ದರು. ಸೀರಿಯಲ್ ಸಂಖ್ಯೆ ನಮೂದಿಸಲಾದ ಸಮೋಸಾದ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. ನಾನು ಆರ್ಡರ್ ಮಾಡಿದ ಸಮೋಸಾವು ಕ್ರಮ ಸಂಖ್ಯೆಯನ್ನು ಹೊಂದಿದೆ ಎಂದು ಶೀರ್ಷಿಕೆ ನೀಡಿದ್ದರು. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ರಿಟ್ವೀಟ್ಗಳನ್ನು ಸಂಪಾದಿಸಿದೆ. ಇತರೆ ಟ್ವೀಟರ್ ಬಳಕೆದಾರರು ಈ ಸಮೋಸಾದಲ್ಲಿರುವ ಸಂಖ್ಯೆಯನ್ನು ಡಿಕೋಡ್ ಮಾಡಲು ಯತ್ನಿಸಿದ್ದಾರೆ. ಅನೇಕರು ಇದು ರೊಬೋಟ್ಗಳು ತಯಾರಿಸಿದ ಸಮೋಸಾ ಎಂದರೆ ಇನ್ನೂ ಹಲವರು ದೇಸಿ ಆಹಾರದಲ್ಲೂ ಎನ್ಎಫ್ಟಿ ಎಂಟ್ರಿ ನೀಡಿದೆ ಎಂದಿದ್ದಾರೆ. ದಿವಾಕರ್ ಎಂಬವರು ಈ ರೀತಿಯ ಸ್ಟ್ಯಾಂಪ್ಗಳು ಸಮೋಸಾದ ಬಗೆಯನ್ನು ತಿಳಿಸುತ್ತದೆ. ಈ ಸಮೋಸಾಗಳು ನಿಜಕ್ಕೂ ರುಚಿಕರವಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ . ಅಂದಹಾಗೆ ಈ ಕೋಡ್ ಇರುವ ಸಮೋಸಾಗಳು ಹೊಸ ಉದ್ಯಮ ಆರಂಭಿಸಿರುವ ಸಮೋಸಾ ಪಾರ್ಟಿಯ ವಿಶೇಷತೆಯಾಗಿದೆ. ಈ ಕಂಪನಿಯು ಬೆಂಗಳೂರು ಹಾಗೂ ಗುರುಗ್ರಾಮದಲ್ಲಿ ತಮ್ಮ ಶಾಖೆಯನ್ನು ತೆರೆದಿದೆ. ಈ ಕೋಡ್ಗಳು ಸಮೋಸಾದ ಬಗೆಯನ್ನು ತಿಳಿಸುತ್ತದೆ. What Next? Where is the QR?*** Samosa As A Service *** #SaaS #Samosa https://t.co/rwTalxTilV — Alok Kumar (@_Alok108) September 2, 2021 What next, RFID?? 😂😂 https://t.co/oI4vYlh1Gt — GirlGoingThroughLife (@AnteeQaa) September 2, 2021 What next, RFID?? 😂😂 https://t.co/oI4vYlh1Gt — GirlGoingThroughLife (@AnteeQaa) September 2, 2021