ಇತ್ತೀಚಿನ ವರ್ಷಗಳಲ್ಲಿ ಭಾರತೀಯ ರೈಲ್ವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯವಾಗಿದೆ. ಶತಾಬ್ದಿ ಎಕ್ಸ್‌ಪ್ರೆಸ್ ಪ್ರಯಾಣಿಕರೊಬ್ಬರು ರೈಲಿನಲ್ಲಿ ಸಿಕ್ಕ ಆಹಾರದ ಗುಣಮಟ್ಟ ತೋರುವ ಚಿತ್ರವೊಂದನ್ನು ಹಾಕಿದ್ದು, ಅದೀಗ ವೈರಲ್ ಆಗಿದೆ.
“ಬಹಳ ವರ್ಷಗಳ ಬಳಿಕ ಶತಾಬ್ದಿಯಲ್ಲಿ ಸಂಚರಿಸಿದೆ. ಆಹಾರದ ಗುಣಮಟ್ಟ ಕಂಡು ನಾನು ನಿಜಕ್ಕೂ ಖುಷಿಯಾಗಿರುವೆ. ಕಳೆದ 9 ವರ್ಷಗಳಲ್ಲಿ ರೈಲ್ವೇ ನಿಜಕ್ಕೂ ಬಹಳ ಬದಲಾಗಿದೆ,” ಎಂದು ಕ್ಯಾಪ್ಷನ್ ಹಾಕಿ ಈ ಚಿತ್ರ ಶೇರ್ ಮಾಡಲಾಗಿದೆ.
ದಾಲ್, ಚಿಕನ್, ಆಲೂ ಸಬ್ಜಿ, ಅನ್ನ ಹಾಗೂ ಚಪಾತಿ ಇರುವ ಈ ಚಿತ್ರ ನೋಡಿದ ಯಾರಿಗಾದರೂ ಬಾಯಲ್ಲಿ ನೀರೂರುತ್ತಿದೆ. ಈ ಪೋಸ್ಟ್ ಬಹುಬೇಗ ವೈರಲ್ ಆಗಿದ್ದು ಕೇಂದ್ರ ಸಚಿವೆ ದರ್ಶನಾ ಜರ್ದೋಶ್ ರೀಟ್ವೀಟ್ ಮಾಡಿದ್ದು, “ನವ ಭಾರತದ ನವ ರೈಲಿನಲ್ಲಿನ ಆಹಾರದ ಸೇವೆಯನ್ನು ನೀವು ಆನಂದಿಸಿದ್ದೀರಿ ಎಂದು ಕೇಳಿ ಸಂತಸವಾಯಿತು,” ಎಂದು ಹೇಳಿದ್ದಾರೆ.
“ಚಿತ್ರದಲ್ಲಿರುವ ಆಹಾರ ಬಲು ಚೆನ್ನಾಗಿರುವಂತೆ ಕಾಣುತ್ತಿದೆ,” ಎಂದು ಅನೇಕ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆ ಹರಿಸಿದ್ದಾರೆ.