ನವದೆಹಲಿ: ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ನಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುತ್ತಿದೆ. ಈಗ ಟ್ವಿಟರ್ ಅಕ್ಷರದ ಮಿತಿಯನ್ನು 280 ರಿಂದ 4000 ಕ್ಕೆ ಹೆಚ್ಚಿಸಲು ಮಸ್ಕ್ ನಿರ್ಧರಿಸಿದ್ದಾರೆ, ಬಳಕೆದಾರರು ತಮ್ಮ ಸಂದೇಶಗಳನ್ನು 280 ಅಕ್ಷರಗಳ ಮಿತಿಯಿಂದ 4 ಸಾವಿರವರೆಗೆ ಬರೆಯಬಹುದಾಗಿದೆ.
2017ರ ನವೆಂಬರ್ 8ರಂದು ಟ್ವಿಟರ್ ತನ್ನ ಅಕ್ಷರಗಳ ಮಿತಿಯನ್ನು 140 ರಿಂದ 280 ಕ್ಕೆ ದ್ವಿಗುಣಗೊಳಿಸಿತ್ತು. ಇದರ ಹೊರತಾಗಿಯೂ ಹಲವರಿಗೆ ಇದು ಕಿರಿಕಿರಿಯಾಗುತ್ತಿತ್ತು. ಆದ್ದರಿಂದ ಸರಣಿ ಟ್ವೀಟ್ ಮಾಡಬೇಕಿತ್ತು. ಇದೀಗ ಒಂದೇ ಟ್ವೀಟ್ನಲ್ಲಿ ಎಲ್ಲವನ್ನೂ ಹೇಳಲು ಅವಕಾಶ ಕಲ್ಪಿಸಲಾಗಿದೆ.
ಇನ್ನು, ಟ್ವಿಟರ್ ಬ್ಲೂನ ಪರಿಷ್ಕೃತ ಆವೃತ್ತಿಯು ಆಪಲ್ ಗ್ರಾಹಕರಿಗೆ ಮರು ಪ್ರಾರಂಭಿಸುವುದಾಗಿ ಎಲಾನ್ ಮಸ್ಕ್ ತಿಳಿಸಿದ್ದಾರೆ. ಸಂಸ್ಥೆಯ ಪ್ರಕಾರ, ಬಳಕೆದಾರರು ವೆಬ್‌ಗಾಗಿ ತಿಂಗಳಿಗೆ $8 ಮತ್ತು ಆ್ಯಪಲ್ ಐಒಎಸ್ಗಾಗಿ ತಿಂಗಳಿಗೆ $11 ಗೆ ನವೀಕರಿಸಿದ ಸೇವೆಗೆ ಚಂದಾದಾರರಾಗಬಹುದು.