ಸುದ್ದಿ ವಾಹಿನಿಗಳ ಟ್ವಿಟರ್ ಹ್ಯಾಂಡಲ್‌ಗಳು ಪ್ರಕಟಿಸುವ ಸುದ್ದಿಗಳನ್ನು ಓದಬೇಕಾದಲ್ಲಿ ಬಳಕೆದಾರರಿಗೆ ಚಾರ್ಜ್ ಮಾಡಲು ಅನುವು ಮಾಡಿಕೊಡುವುದಾಗಿ ಟ್ವಿಟರ್ ತಿಳಿಸಿದೆ.
ಮುಂದಿನ ತಿಂಗಳಿನಿಂದ ಪ್ರಭಾವಕ್ಕೆ ಬರುವಂತೆ, ಕಂಟೆಂಟ್ ಸೃಷ್ಟಿಕರ್ತರಿಗೆ ತಾವು ಪ್ರಕಟಿಸುವ ಕಂಟೆಂಟ್‌ಗೆ ಚಾರ್ಜ್ ಮಾಡಲು ಅವಕಾಶ ಕೊಡುವುದಾಗಿ ತಿಳಿಸಿರುವ ಟ್ವಿಟರ್ ಸಿಇಓ ಎಲಾನ್ ಮಸ್ಕ್, “ಮಾಧ್ಯಮದ ಪತ್ರಕರ್ತರಿಗೆ ತಮ್ಮ ಬಳಕೆದಾರರು ಪ್ರತಿ ಸುದ್ದಿ ಆಧಾರದ ಮೇಲೆ ಒಂದು ಕ್ಲಿಕ್‌ನಿಂದ ಪಾವತಿ ಮಾಡುವ ವ್ಯವಸ್ಥೆಗೆ ಮುಂದಿನ ತಿಂಗಳಿನಿಂದ ಚಾಲನೆ ನೀಡಲಾಗುವುದು. ಇದರಿಂದಾಗಿ ನಿಮಗೆ ಒಳ್ಳೆಯ ಕಂಟೆಂಟ್ ಕೊಡಲು ಕಂಟೆಂಟ್ ಸೃಷ್ಟಿಕರ್ತರು ಇನ್ನಷ್ಟು ಸಮಯ ಮೀಸಲಿಡುವಂತೆ ಉತ್ತೇಜನ ನೀಡುವುದಾಗಿದೆ,” ಎಂದು ಟ್ವೀಟ್ ಮಾಡಿದ್ದಾರೆ.
ಈ ಮಾನಿಟೈಜ಼ೇಷನ್ ಟೂಲ್‌ನಿಂದ ಕಂಟೆಂಟ್ ಸೃಷ್ಟಿಕರ್ತರು ಒಂದಷ್ಟು ಹಣ ಸಂಪಾದಿಸಬಹುದಾಗಿದೆ ಎಂದು ಟ್ವಿಟರ್ ತಿಳಿಸಿದೆ.