ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗ್ತಿದ್ದಂತೆ ಬಳಕೆದಾರರಿಗೆ ಅನುಕೂಲ ಮಾಡಿಕೊಡಲು ಸಾಮಾಜಿಕ ಜಾಲತಾಣ ಕಂಪನಿಗಳು ಸೌಲಭ್ಯಗಳನ್ನು ನವೀಕರಿಸುತ್ತಿವೆ. ಇದ್ರಲ್ಲಿ ಟ್ವಿಟರ್ ಕೂಡ ಹೊರತಾಗಿಲ್ಲ. ಟ್ವಿಟರ್ ಅಂಡೋ ಬಟನ್ ಪರೀಕ್ಷಿಸುತ್ತಿದೆ. ಇದು ಟ್ವಿಟರ್ ಬಳಕೆದಾರರಿಗೆ ಸುಲಭವಾಗಲಿದೆ. ಪೋಸ್ಟ್ ಮಾಡುವ ಮೊದಲು ಟ್ವೀಟ್ ವಾಪಸ್ ಪಡೆಯಲು ಕಡಿಮೆ ಸಮಯವನ್ನು ಇದು ತೆಗೆದುಕೊಳ್ಳಲಿದೆ.
ಟ್ವಿಟರ್ ನಲ್ಲಿ ಇದು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕಂಪನಿ ಪರೀಕ್ಷಿಸುತ್ತಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ. ಈ ವೈಶಿಷ್ಟ್ಯವು ಟ್ವಿಟರ್ ಬಳಕೆದಾರರಿಗೆ ದೀರ್ಘ ಆಯ್ಕೆಯಾಗಿರದಿದ್ದರೂ, ಕಳುಹಿಸಿದ ನಂತರ ಟ್ವೀಟ್ ರದ್ದುಗೊಳಿಸಲು ಇದು ಹಲವಾರು ಸೆಕೆಂಡುಗಳವರೆಗೆ ಸಂಕ್ಷಿಪ್ತ ಅವಕಾಶವನ್ನು ನೀಡುತ್ತದೆ.
ಗೂಗಲ್ ʼಕ್ರೋಮ್ʼ ಬಳಕೆದಾರರಿಗೊಂದು ಮಹತ್ವದ ಸುದ್ದಿ
ಈ ವೈಶಿಷ್ಟ್ಯವು ಡಿಲಿಟ್ ಆಯ್ಕೆ ಜೊತೆಗೆ ಇರುತ್ತದೆ. ಆದರೆ ಬಳಕೆದಾರರ ಟೈಮ್‌ಲೈನ್‌ನಲ್ಲಿ ಟ್ವೀಟ್ ಕಾಣಿಸಿಕೊಳ್ಳುವುದಿಲ್ಲ. ಪರೀಕ್ಷೆ ನಂತ್ರ ಶೀಘ್ರವೇ ಟ್ವಿಟರ್ ಈ ಆಯ್ಕೆಯನ್ನು ಬಳಕೆದಾರರಿಗೆ ನೀಡುವ ಸಾಧ್ಯತೆಯಿದೆ.