ಅತ್ಯಾಚಾರ ಕೊಲೆಯ ಸಂತ್ರಸ್ತೆಯೊಬ್ಬರ ಬಂಧುಗಳ ಗುರುತನ್ನು ಬಹಿರಂಗಪಡಿಸುವ ಟ್ವೀಟ್ ಒಂದನ್ನು ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಖಾತೆಯನ್ನು ಅಮಾನತುಗೊಳಿಸಿದ್ದಾಗಿ ಟ್ವಿಟರ್ ತಿಳಿಸಿದೆ.
“ಶ್ರೀ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಅದನ್ನು ಮರಳಿ ಸ್ಥಾಪಿಸಲು ಸೂಕ್ತ ಕ್ರಿಯೆಗಳನ್ನು ಆರಂಭಿಸಲಾಗಿದೆ. ಅಲ್ಲಿವರೆಗೂ ಅವರು ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣದ ಇತರ ಎಲ್ಲಾ ಪ್ಲಾಟ್‌ಫಾರಂಗಳಲ್ಲಿ ಮುಂದುವರೆಯಲಿದ್ದು, ನಮ್ಮ ಜನರು ಹಾಗೂ ಅವರಿಗಾಗಿ ದನಿ ಏರಿಸುವುದನ್ನು ಮುಂದುವರೆಸಲಿದ್ದಾರೆ. ಜೈ ಹಿಂದ್” ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಘೋಷಿಸಿದೆ.
LICಯ ಈ ಪಾಲಿಸಿ ಮೇಲೆ ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ 28 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ
ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲಾದ ಅತ್ಯಾಚಾರದ ವಿರುದ್ಧ ದನಿಗೂಡಿಸುವ ಭರದಲ್ಲಿ ಸಂತ್ರಸ್ತೆಯ ಗುರುತು ಬಹಿರಂಗವಾಗುವ ಹಾಗೆ ಟ್ವೀಟ್ ಮಾಡಿದ್ದ ಕಾರಣ ರಾಹುಲ್ ಗಾಂಧಿ ಅವರ ಖಾತೆಯನ್ನು ರದ್ದು ಮಾಡಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದೆಹಲಿ ಪೊಲೀಸ್ ಹಾಗೂ ಟ್ವಿಟರ್‌ಗೆ ಕೇಳಿಕೊಂಡಿತ್ತು.