ಮೈಕ್ರೋ ಬ್ಲಾಗಿಂಗ್ ಫ್ಲಾಟ್ಫಾರಂ ಟ್ವಿಟರ್ ಸಂಸ್ಥೆ ಕೊನೆಗೂ ಗ್ರಾಹಕರ ಬಹುಬೇಡಿಕೆಯ ಸೌಲಭ್ಯವನ್ನ ಪರಿಚಯಿಸಿದೆ. ಟ್ವಿಟರ್ನಲ್ಲಿ ಇನ್ಮುಂದೆ ವಾಯ್ಸ್ ಟ್ವೀಟ್ಗಳಿಗೂ ಶೀರ್ಷಿಕೆ ನೀಡಬಹುದಾಗಿದೆ. ಕಳೆದ ವರ್ಷ ಟ್ವಿಟರ್ ಸಂಸ್ಥೆ ವಾಯ್ಸ್ ಟ್ವೀಟ್ ಸೌಲಭ್ಯವನ್ನ ಪರಿಚಯಿಸಿತ್ತು.
ಜೂನ್ 2020ರಿಂದ ವಾಯ್ಸ್ ಟ್ವೀಟ್ ವ್ಯವಸ್ಥೆಯನ್ನ ಟ್ವಿಟರ್ ಸಂಸ್ಥೆ ಜಾರಿಗೆ ತಂದಿದೆ. ಈ ಸಂದರ್ಭದಲ್ಲಿ ವಾಯ್ಸ್ ಟ್ವೀಟ್ಗಳಿಗೆ ಶೀರ್ಷಿಕೆ ನೀಡಲು ಏಕೆ ಸಾಧ್ಯವಾಗೋದಿಲ್ಲ ಎಂದು ಅನೇಕ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ಬಳಕೆದಾರರ ಬೇಡಿಕೆಯನ್ನ ಆಲಿಸಿರುವ ಟ್ವಿಟರ್ ಸಂಸ್ಥೆ ಈ ಸೌಲಭ್ಯವನ್ನ ಪರಿಚಯಿಸಿದೆ. ನೀವು ವಾಯ್ಸ್ ಟ್ವೀಟ್ ಮಾಡುತ್ತಿದ್ದಂತೆಯೇ ಇಂಗ್ಲೀಷ್, ಜಪಾನೀಸ್, ಸ್ಪ್ಯಾನಿಷ್, ಪೋರ್ಚುಗೀಸ್, ಟರ್ಕಿಷ್, ಅರೇಬಿಕ್, ಹಿಂದಿ, ಫ್ರೆಂಚ್, ಇಂಡೋನೇಷಿಯನ್, ಕೊರಿಯನ್ ಹಾಗೂ ಇಟಾಲಿಯನ್ ಭಾಷೆಗಳಲ್ಲಿ ಶೀರ್ಷಿಕೆ ನೀಡಬಹುದಾಗಿದೆ.
ಪ್ರಸ್ತುತ ಈ ಹೊಸ ಸೌಲಭ್ಯ ಐಓಎಸ್ ಸಾಧನಗಳಲ್ಲಿ ಮಾತ್ರ ಲಭ್ಯವಿದೆ. ಟ್ವೀಟ್ನಲ್ಲಿ ಶೀರ್ಷಿಕೆಗಳನ್ನ ನೋಡಲು ನೀವು ಸಿಸಿ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಹೊಸ ವಾಯ್ಸ್ ಟ್ವೀಟ್ಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಹೀಗಾಗಿ ಹಳೆಯ ವಾಯ್ಸ್ ಟ್ವೀಟ್ಗಳಿಗೆ ಈ ಆಯ್ಕೆ ಸಿಗೋದಿಲ್ಲ.