
ಶುಕ್ರವಾರ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಈ ದೃಶ್ಯ ಕಂಡುಬಂದಿದೆ. ಅಂತಿಮ ಎರಡು ಓವರ್ ನಲ್ಲಿ ಪಾಕಿಸ್ತಾನಕ್ಕೆ 24 ರನ್ ಗಳ ಅಗತ್ಯವಿದ್ದಾಗ ಆಸಿಫ್ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಪಾಕಿಸ್ತಾನ ಅಫ್ಘನ್ ವಿರುದ್ಧ ಗೆದ್ದು ಬೀಗಿದೆ. ಈ ವೇಳೆ ಪಾಕಿಸ್ತಾನದ ಬ್ಯಾಟ್ಸ್ ಮ್ಯಾನ್ ಆಸಿಫ್ ಗನ್‌ಶಾಟ್ ಮೂಲಕ ಸಂಭ್ರಮಿಸಿದ್ದಾರೆ.
ಇದನ್ನು ಈ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಅವರು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಹಲವು ಬಾರಿ ಮಾಡಿದ್ದಾರೆ.
ಪಾಕ್ ಕ್ರಿಕೆಟಿಗ ಆಸಿಫ್ ಸಂಭ್ರಮಾಚರಣೆಯು 2005 ರಲ್ಲಿ ಧೋನಿ ಮಾಡಿದ್ದ ಗನ್ ಶಾಟ್ ನಡುವಿನ ವ್ಯತ್ಯಾಸಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹಂಚಿಕೊಂಡಿದ್ದಾರೆ.