
ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಗೆ ಭಾರಿ ಹೊಡೆತ ಬಿದ್ದಿದೆ. ಟ್ವಿಟರ್ ಭಾರತದಲ್ಲಿ ಮಧ್ಯವರ್ತಿ ಸ್ಥಾನವನ್ನು ಕಳೆದುಕೊಂಡಿದೆ ಎಂದು ಸರ್ಕಾರ ಹೇಳಿದೆ.
ಮೇ 26 ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳನ್ನು ಟ್ವಿಟರ್ ಇದುವರೆಗೆ ಪಾಲಿಸಿಲ್ಲ. ಹೊಸ ಕಾನೂನು ಪಾಲಿಸದ ದೇಶದ ಏಕೈಕ ಸಾಮಾಜಿಕ ಜಾಲತಾಣವಾಗಿದೆ ಟ್ವಿಟರ್ ಎಂದು ವರದಿಯಾಗಿತ್ತು. ಹೊಸ ಐಟಿ ನಿಯಮಗಳ ಪ್ರಕಾರ ಸಾಮಾಜಿಕ ಜಾಲತಾಣಗಳು ನೋಡಲ್ ವ್ಯಕ್ತಿ, ಕುಂದುಕೊರತೆ ಅಧಿಕಾರಿ ಮತ್ತು ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಬೇಕು. ಟ್ವಿಟರ್ ಈವರೆಗೂ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಿಲ್ಲ. ಈ ಬಗ್ಗೆ ಸರ್ಕಾರ ನೊಟೀಸ್ ನೀಡಿದ್ದರೂ ಟ್ವಿಟರ್ ಅಧಿಕಾರಿ ನೇಮಕ ಮಾಡಿಲ್ಲ.
ಆದ್ರೆ ಮಂಗಳವಾರ ಟ್ವಿಟ್ಟರ್ ವಕ್ತಾರರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಕಂಪನಿಯು ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗ್ತಿದೆ. ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಶೀಘ್ರದಲ್ಲೇ ವಿವರಗಳನ್ನು ಸಚಿವಾಲಯಕ್ಕೆ ನೀಡುವುದಾಗಿ ಹೇಳಿದ್ದಾರೆ.