ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಬಳಿಕ ಟ್ವೀಟರ್ ಭವಿಷ್ಯ ಅನಿಶ್ಚತತೆಗೆ ತಳ್ಳಲ್ಪಟ್ಟಿತೇ? ಹೀಗೊಂದು ಚರ್ಚೆ ನಡೆದಿದೆ. ಒಪ್ಪಂದವು ಮುಕ್ತಾಯಗೊಂಡ ನಂತರ ಸಾಮಾಜಿಕ ಮಾಧ್ಯಮ ಸಂಸ್ಥೆಯ ಭವಿಷ್ಯವು ಅನಿಶ್ಚಿತವಾಗಿದೆ ಎಂದು ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್ ಸೋಮವಾರ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡುತ್ತಾ, ಒಮ್ಮೆ ಒಪ್ಪಂದವು ಮುಕ್ತಾಯಗೊಂಡರೆ, ಈ ವೇದಿಕೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂದು ನಮಗೆ ತಿಳಿದಿಲ್ಲ ಎಂದು ಅಗರವಾಲ್ ಹೇಳಿದರು.
ಕೆಲವೇ ದಿನಗಳಲ್ಲಿ ಮಸ್ಕ್, ಟ್ವಿಟರ್ ಸಿಬ್ಬಂದಿಯೊಂದಿಗೆ ಪ್ರಶ್ನೋತ್ತರ ಕಲಾಪದಲ್ಲಿ ಪಾಲ್ಗೊಳ್ಳುವರು ಎಂದು ಕಂಪನಿ ಈಗಾಗಲೇ ತಿಳಿಸಿದೆ.
ಸೋಮವಾರ ಬಿಲಿಯನೇರ್ ಎಲಾನ್ ಮಸ್ಕ್, ಟ್ವಿಟರ್ ಅನ್ನು $44 ಶತಕೋಟಿಗೆ ಖರೀದಿಸಲು ಒಪ್ಪಂದವನ್ನು ಮಾಡಿಕೊಂಡಿದ್ದು, ಮಾಲೀಕತ್ವ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಇನ್ನೊಂದು ಕಡೆ ಶ್ವೇತ ಭವನ ಸಹ ಕಳವಳ ವ್ಯಕ್ತಪಡಿಸಿದೆ.