ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿದ್ದು, ನಂತರದಲ್ಲಿ ಖಾತೆಯನ್ನು ಮರುಸ್ಥಾಪಿಸಲಾಗಿದೆ
ಏಪ್ರಿಲ್ 9 ರ ಶನಿವಾರ ಮುಂಜಾನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಸುಮಾರು 4 ಗಂಟೆಗಳ ನಂತರ, ಖಾತೆಯನ್ನು ಭಾಗಶಃ ಮರುಸ್ಥಾಪಿಸಲಾಗಿದೆ. ಖಾತೆಯನ್ನು ಸರಿಪಡಿಸಿದ ನಂತರ ಹ್ಯಾಕರ್ ಗಳು ಪೋಸ್ಟ್ ಮಾಡಿದ ಟ್ವೀಟ್ ಗಳನ್ನು ತೆಗೆದುಹಾಕಲಾಗಿದೆ.
ಯುಪಿ ಸಿಎಂಒ ಅಧಿಕೃತ ಟ್ವಿಟರ್ ಅನ್ನು ಹ್ಯಾಕರ್ ಗಳು ಹ್ಯಾಕ್ ಮಾಡಿ, ನೂರಕ್ಕೂ ಹೆಚ್ಚು ಟ್ವೀಟ್ಗಳನ್ನು ಮಾಡಲಾಗಿದೆ. ಟ್ವಿಟರ್ ಹ್ಯಾಂಡಲ್ ನಿಂದ ಮುಖ್ಯಮಂತ್ರಿಗಳ ಡಿಸ್ ಪ್ಲೇ ಚಿತ್ರವನ್ನು ಹ್ಯಾಕರ್ ಗಳು ತೆಗೆದುಹಾಕಿದ್ದರು.
ಯುಪಿ ಸಿಎಂಒದ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿರುವ ಬಗ್ಗೆ ಬಳಕೆದಾರರಿಗೆ ತಿಳಿದ ತಕ್ಷಣ, ಜನರು ಹ್ಯಾಕಿಂಗ್ನ ಸ್ಕ್ರೀನ್ ಶಾಟ್ ಗಳೊಂದಿಗೆ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಯುಪಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಕೆಲವು ಗಂಟೆಗಳ ನಂತರ, ಖಾತೆಯನ್ನು ಭಾಗಶಃ ಮರುಸ್ಥಾಪಿಸಲಾಗಿದ್ದು, ಹ್ಯಾಕ್ ಮಾಡಿದಾಗ ಹ್ಯಾಂಡಲ್ ಪೋಸ್ಟ್ ಮಾಡಿದ ಟ್ವೀಟ್ ಗಳನ್ನು ಅಳಿಸಲಾಗಿದೆ.