
ಕೆಲ ದಿನಗಳ ಹಿಂದಷ್ಟೇ ಪ್ರಭಾವಿ ಸಾಮಾಜಿಕ ಮಾಧ್ಯಮ ವಾಟ್ಸಾಪ್ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಡೌನ್ ಆಗಿದ್ದು, ಗಂಟೆಗಳ ಕಾಲ ಬಳಕೆದಾರರು ಪರದಾಡಿದ್ದರು. ಇದಾದ ಬಳಿಕ instagram ಕೂಡ ಡೌನ್ ಆಗಿದ್ದು, ಬಳಿಕ ಸರಿಯಾಗಿತ್ತು.
ಇದೀಗ ಮತ್ತೊಂದು ಪ್ರಭಾವಿ ಸಾಮಾಜಿಕ ಮಾಧ್ಯಮ ಟ್ವಿಟ್ಟರ್, ಇಂದು ಬೆಳಗ್ಗೆ ಕೆಲ ಸಮಯ ಡೌನ್ ಆಗಿತ್ತು ಎಂದು ಹೇಳಲಾಗಿದೆ. ಹಲವು ಬಳಕೆದಾರರು ಇದನ್ನು ಬರೆದುಕೊಂಡಿದ್ದಾರೆ. ಅದರಲ್ಲೂ ವೆಬ್ ಮೂಲಕ ಟ್ವಿಟ್ಟರ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಆಪ್ ಮೂಲಕ ಟ್ವಿಟರ್ ಬಳಸುವವರು ಹೆಚ್ಚಿನ ಸಮಸ್ಯೆ ಎದುರಿಸಿಲ್ಲ.
ಟ್ವಿಟ್ಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಖರೀದಿಸಿದ ಬಳಿಕ ಹಲವು ಬದಲಾವಣೆಗಳು ಆಗುತ್ತಿದ್ದು, ಬ್ಲೂ ಟಿಕ್ ಪಡೆಯಲು ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಇದರ ಮಧ್ಯೆ ಇಂದು ಕೆಲ ಸಮಯ ಟ್ವಿಟ್ಟರ್ ಡೌನ್ ಆದ ಕಾರಣ ಕೆಲವರು ತಮಾಷೆಯ ಕಾಮೆಂಟ್ಗಳನ್ನು ಹಾಕಿದ್ದಾರೆ.

