ಟ್ವಿಟರ್ ಸಂಸ್ಥೆಯು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರ ಖಾತೆಯನ್ನ ಲಾಕ್ ಮಾಡಿತ್ತು.
ಇದರಿಂದಾಗಿ ತಮ್ಮ ಸ್ವಂತ ಟ್ವಿಟರ್ ಖಾತೆಗೆ ರವಿಶಂಕರ್ ಪ್ರಸಾದ್ಗೆ ಎಂಟ್ರಿ ಇಲ್ಲದಂತೆ ಆಗಿತ್ತು. ರವಿಶಂಕರ್ ಪ್ರಸಾದ್ರ ಟ್ವಿಟರ್ ಖಾತೆ ಸಾರ್ವಜನಿಕವಾಗಿ ಗೋಚರವಾಗಿತ್ತಿದ್ದರೂ ಸಹ ಖಾತೆಯ ಪಾಸ್ವರ್ಡ್ ತಿಳಿದವರಿಗೆ ಅಕೌಂಟ್ ಪ್ರವೇಶಿಸಲು ಹಾಗೂ ಯಾವುದೇ ಪೋಸ್ಟ್ಗಳನ್ನ ಶೇರ್ ಮಾಡಲು ಟ್ವಿಟರ್ ಅನುಮತಿ ನೀಡುತ್ತಿಲ್ಲ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಅವರ ತಂಡ ಟ್ವಿಟರ್ ಖಾತೆಗೆ ಲಾಗಿನ್ ಮಾಡಲು ಪ್ರಯತ್ನಿಸಿದ ವೇಳೆಯಲ್ಲಿ, ಡಿಜಿಟಲ್ ಮಿಲೇನಿಯಂ ಕಾಪಿರೈಟ್ ಆಕ್ಟ್ನ ಅಡಿಯಲ್ಲಿ ದಾಖಲಾದ ದೂರನ್ನ ಪರಿಗಣಿಸಿ ನಿಮ್ಮ ಖಾತೆಯನ್ನ ಲಾಕ್ ಮಾಡಲಾಗಿದೆ. ಈ ಖಾತೆಯ ಬಳಕೆದಾರರು ಟ್ವಿಟರ್ ನಿಯಮಾವಳಿಗಳನ್ನ ಉಲ್ಲಂಘಿಸಿದ್ದಾರೆ. ನಿಯಾಮವಳಿಗಳನ್ನ ಉಲ್ಲಂಘಿಸಿದ ಅಂಶಗಳನ್ನ ನಿಮ್ಮ ಖಾತೆಯಿಂದ ತೆಗೆದು ಹಾಕಿದ ಬಳಿಕ ಖಾತೆ ಪ್ರವೇಶಿಸಲು ಟ್ವಿಟರ್ ಅನುಮತಿ ನೀಡಲಿದೆ. ಆದರೆ ಈ ತಪ್ಪುಗಳು ಪುನಾರವರ್ತನೆಯಾದಲ್ಲಿ ಹಕ್ಕು ಸ್ವಾಮ್ಯ ಉಲ್ಲಂಘನೆ ನೀತಿಯ ಅಡಿಯಲ್ಲಿ ಟ್ವಿಟರ್ ನಿಮ್ಮ ಖಾತೆಯನ್ನ ಶಾಶ್ವತವಾಗಿ ಅಳಿಸಿ ಹಾಕಲಿದೆ ಎಂದು ಸಂದೇಶ ನೀಡಿದೆ.