ಸೋಮವಾರ ಬಿಲಿಯನೇರ್ ಎಲಾನ್ ಮಸ್ಕ್ ಟ್ವಿಟರ್ ಅನ್ನು $44 ಶತಕೋಟಿಗೆ ಖರೀದಿಸಲು ಒಪ್ಪಂದವನ್ನು ಮಾಡಿಕೊಂಡರು, ಈ ಮೂಲಕ ಹೊಸ ಬೆಳವಣಿಗೆ, ಚರ್ಚೆಗಳು ಶುರುವಾಗಿದೆ.
ಮಾಲೀಕತ್ವ ಬದಲಾಗುತ್ತಿದ್ದಂತೆ, ಅಲ್ಲಿನ ಸಿಇಒರನ್ನು ವಜಾಮಾಡಬಹುದೇ ? ವಜಾ ಮಾಡಿದರೆ ಅವರಿಗೆ ಎಷ್ಟು ಹಣ ಕೊಡಬೇಕಾಗುತ್ತದೆ ಎಂಬ ಚರ್ಚೆ ನಡೆದಿದೆ.
ಕಂಪನಿಯಲ್ಲಿ ನಿಯಂತ್ರಣ ಬದಲಾಯಿಸಿದ 12 ತಿಂಗಳೊಳಗೆ ಸಿಇಒ ಪರಾಗ್ ಅಗರವಾಲ್ ಅವರನ್ನು ವಜಾಗೊಳಿಸಿದರೆ ಕಂಪನಿಯಿಂದ ಅಂದಾಜು $ 42 ಮಿಲಿಯನ್ ಪಡೆಯುತ್ತಾರೆ ಎಂದು ರಿಸರ್ಚ್ ಸಂಸ್ಥೆ ಈಕ್ವಿಲಾರ್ ತಿಳಿಸಿದೆ.
66ರ ಹರೆಯದಲ್ಲಿ 38ರ ಮಹಿಳೆಯೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಮಾಜಿ ಕ್ರಿಕೆಟಿಗ…!
ಏಪ್ರಿಲ್ 14 ರಂದು ಸೆಕ್ಯುರಿಟೀಸ್ ಫೈಲಿಂಗ್‌ನಲ್ಲಿ ಮಸ್ಕ್ ಅವರು ಟ್ವಿಟರ್‌ನ ಮ್ಯಾನೇಜ್‌ಮೆಂಟ್‌ನಲ್ಲಿ ವಿಶ್ವಾಸ ಹೊಂದಿಲ್ಲ ಎಂದು ಹೇಳಿದ್ದರು. ಹೀಗಾಗಿ ಈ ಚರ್ಚೆ ಮುನ್ನೆಲೆಗೆ ಬಂದಿದೆ.
ಈಕ್ವಿಲಾರ್‌ನ ಅಂದಾಜು ಪ್ರಕಾರ, ಒಂದು ವರ್ಷದ ಅಗರವಾಲ್ ಮೂಲ ವೇತನ ಮತ್ತು ಎಲ್ಲಾ ಇಕ್ವಿಟಿ ಅವಾರ್ಡ್ ಒಳಗೊಂಡಿದೆ ಎಂದು ವಕ್ತಾರರು ಹೇಳಿದ್ದಾರೆ. ಮಸ್ಕ್‌ನ ಪ್ರತಿ ಷೇರಿಗೆ $54.20 ಆಫರ್ ಬೆಲೆ ಮತ್ತು ಕಂಪನಿಯ ಇತ್ತೀಚಿನ ಪ್ರಾಕ್ಸಿ ಹೇಳಿಕೆಯಲ್ಲಿನ ನಿಯಮಗಳ ಆಧಾರದ ಮೇಲೆ ಇದು ನಿರ್ಧಾರವಾಗಲಿದೆ. ಆದರೆ ಟ್ವೀಟರ್ ಹೊಸ ಪ್ರತಿನಿಧಿಗಳು ಈ ಲೆಕ್ಕವನ್ನು ಅಲ್ಲಗಳೆದಿದ್ದಾರೆ.
ಈ ಹಿಂದೆ ಟ್ವಿಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಅಗರವಾಲ್ ಅವರನ್ನು ನವೆಂಬರ್‌ನಲ್ಲಿ ಸಿಇಒ ಆಗಿ ನೇಮಿಸಲಾಗಿತ್ತು.