alex Certify ಟ್ವಿಟರ್​ ʼಬ್ಲೂ ಟಿಕ್ʼ​ ಬೇಕಿದ್ರೆ 665 ರೂಪಾಯಿ….! ತಿಂಗಳೊಳಗೆ ಭಾರತದಲ್ಲಿಯೂ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ʼಬ್ಲೂ ಟಿಕ್ʼ​ ಬೇಕಿದ್ರೆ 665 ರೂಪಾಯಿ….! ತಿಂಗಳೊಳಗೆ ಭಾರತದಲ್ಲಿಯೂ ಜಾರಿ

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ ಪ್ರಕ್ರಿಯೆಗೆ ಐಒಎಸ್ ಮೂಲಕ ಚಾಲನೆ ನೀಡಿದ್ದಾರೆ. ಇದು ಭಾರತದಲ್ಲಿ ಇನ್ನೊಂದು ತಿಂಗಳಿನಲ್ಲಿ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್ ಹೊಸ ಮಾಲೀಕ ಎಲಾನ್ ಮಸ್ಕ್ ಕೆಲವೇ ದಿನಗಳ ಹಿಂದೆ ಘೋಷಿಸಿದ್ದ 8 ಡಾಲರ್​ (ಸುಮಾರು 665 ರೂಪಾಯಿ) ಪರಿಶೀಲನಾ ಸೇವೆಯನ್ನು ಟ್ವಿಟರ್ ಶನಿವಾರ ಹೊರತಂದಿದ್ದು, ಆರಂಭಿಕ ಹಂತವಾಗಿ ಈ ನೂತನ ನವೀಕರಣ ಪ್ರಕ್ರಿಯೆಯು ಪ್ರಸ್ತುತ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಐಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಇದನ್ನು ಭಾರತದಲ್ಲಿ ಯಾವಾಗ ಜಾರಿ ಮಾಡುವಿರಾ ಎಂದು ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಮಸ್ಕ್​ ಬರುವ ತಿಂಗಳು ಎಂದು ಉತ್ತರಿಸಿದ್ದಾರೆ.

ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ಗಳಲ್ಲಿ ಈ ಸೇವೆ ಲಭ್ಯವಿರಲಿದೆ. IOS ಆಪರೇಟಿಂಗ್ ಸಿಸ್ಟಮ್‍ಗಳಲ್ಲಿ ಮಾತ್ರ ಇದು ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್, ‘ಇಂದಿನಿಂದ ನಾವು ಟ್ವಿಟರ್ ಬ್ಲೂ ಟಿಕ್‍ಗೆ ಹೊಸ ಫೀಚರ್ ಗಳನ್ನು ಸೇರಿಸುತ್ತಿದ್ದೇವೆ. ಶೀಘ್ರವೇ ಬಳಕೆದಾರರಿಗೆ ಹೊಸ ಮತ್ತು ಹೆಚ್ಚಿನ ಫೀಚರ್​ಗಳನ್ನು ಪಡೆಯಲಿದ್ದಾರೆ. ಸದ್ಯಕ್ಕೆ ನೀವು ಸೈನ್‍ಅಪ್‍ ಮಾಡಿದರೆ ತಿಂಗಳಿಗೆ 7.99 ಡಾಲರ್ ನೀಡಿ ಟ್ವಿಟರ್ ಬ್ಲೂ ಟಿಕ್ ಪಡೆಯಬಹುದು’ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...