ಮಂಡ್ಯ : ಮಂಡ್ಯ ಜಿಲ್ಲೆಯ ಮೇಲುಕೋಟೆ ಶಿಕ್ಷಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಕ್ಕ ಅಕ್ಕ ಎಂದು ಹಿಂದೆ ಹೋಗಿದ್ದ ತಮ್ಮನೇ ಕೊಲೆಗೆ ಮುಹೂರ್ತ ಇಟ್ಟಿದ್ದ ಎಂಬ ಶಂಕೆ ಮೂಡಿದೆ.
ಇದೀಗ ಸ್ವಗ್ರಾಮದ ಯುವಕ ನಿತೀಶ್ (22) ಎಂಬಾತನ ವಿರುದ್ಧ ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ನಿತೀಶ್ ದೀಪಿಕಾ ಸಾಯುವ ಮುನ್ನ ಕೊನೆಯ ಕರೆ ಮಾಡಿದ್ದನು. ಅಲ್ಲದೇ ಇಬ್ಬರು ಬೆಟ್ಟದ ತಪ್ಪಲಿನಲ್ಲಿ ಜಗಳವಾಡುತ್ತಿದ್ದ ವಿಡಿಯೋ ಕೂಡ ಸೆರೆಯಾಗಿದೆ. ಈ ಹಿನ್ನೆಲೆ ನಿತೀಶ್ ನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗರೊಬ್ಬರು 13 ಸೆಕೆಂಡುಗಳ ವಿಡಿಯೋ ರೆಕಾರ್ಡ್ ಮಾಡಿದ್ದು, ಇದು ಪೊಲೀಸರಿಗೆ ಸಿಕ್ಕಿದೆ.
ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾ ಸ್ನೇಹ ಬೆಳೆಸಿದ್ದ ನಿತೀಶ್ ದೀಪಿಕಾ ಜೊತೆ ಬಹಳ ಸಲುಗೆಯಿಂದಿದ್ದಳು ಎನ್ನಲಾಗಿದೆ. ಯಾವ ಕಾರಣಕ್ಕೆ ನಿತೀಶ್ ಕೊಲೆ ಮಾಡಿದಾ..? ಅಥವಾ ಕೊಲೆಗೆ ಬೇರೆ ಯಾರದ್ದಾದರೂ ಕೈವಾಡ ಇದೆಯಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ಜಾಗದಲ್ಲಿ ದೀಪಿಕಾ ಸ್ಕೂಟಿ ಕೂಡ ಪತ್ತೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು 2 ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ಯುವತಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ. ದೀಪಿಕಾ ಮೇಲುಕೋಟೆಯ ಎಸ್ಇಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಜನವರಿ 20ರ ಮಧ್ಯಾಹ್ನನಿಂದ ದೀಪಿಕಾ ನಾಪತ್ತೆಯಾಗಿದ್ದಳು. ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಜ.20ರ ಸಂಜೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ನಂತರ ದೀಪಿಕಾ ಶವ ಮಂಡ್ಯ ಜಿಲ್ಲೆ ಮೇಲುಕೋಟೆಯ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಪತ್ತೆಯಾಗಿತ್ತು.