
ಮಕಾಯ್ ಹಾಗೂ ಎಲ್ಲಿಯಾನ್ ದ್ವಿವರ್ಣೀಯ ದಂಪತಿಗಳಿಗೆ ಜನಿಸಿದ ಅವಳಿಗಳು. ಮಕಾಯ್ಗೆ ಕೃಷ್ಣವರ್ಣೀಯನಾದರೆ, ಎಲ್ಲಿಯಾನ್ ಶ್ವೇತವರ್ಣೀಯ.
ಈ ಅವಳಿಗಳ ತಾಯಿ ಲಿಯೆಟ್ಟಾ ಹ್ಯಾರಿಸ್ ಆಫ್ರಿಕನ್-ಅಮೆರಿಕ್ ಮಹಿಳೆಯಾಗಿದ್ದು ಆಫ್ರಿಕನ್ ತಾಯಿ ಹಾಗೂ ಆಫ್ರಿಕನ್-ಅಮೆರಿಕನ್ ತಂದೆಗೆ ಜನಿಸಿದ್ದಾರೆ.
ಇದೀಗ ಆಕೆಯ ಮಕ್ಕಳಾದ ಮಕಾಯ್ ಹಾಗೂ ಎಲ್ಲಿಯಾನ್ ಅವಳಿಗಳಾಗಿ ಜನಿಸಿದರೂ ಹೀಗೆ ಭಿನ್ನ ವರ್ಣದ ತ್ವಚೆ ಹೊಂದಿದ್ದಾರೆ. ಈ ಬಗ್ಗೆ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸುವ ತಲೆ ನೋವು ಲಾಂಬಾ ಮತ್ತು ಲಿಯೆಟ್ಟಾ ದಂಪತಿಗಳದ್ದು.
‘ಅರೆಸ್ಟ್ ಸ್ವರಾ ಭಾಸ್ಕರ್’ ಅಭಿಯಾನಕ್ಕೆ ಕೆಂಡಾಮಂಡಲಗೊಂಡ ನಟಿ
“ಅವರಿಬ್ಬರೂ ಅವಳಿಗಳೋ ಎಂದು ಜನರು ಪದೇ ಪದೇ ಕೇಳುತ್ತಲೇ ಇರುತ್ತಾರೆ. ನಾವು ಹೌದು ಎಂದಾಗ ಗೊಂದಲಕ್ಕೀಡಾಗುವ ಅವರು ತಮಾಷೆಯಿಂದ ಇಬ್ಬರ ತಂದೆ ಒಬ್ಬರೇನಾ ಎಂದು ಹೇಳುತ್ತಾರೆ” ಎಂದು ಲಿಯೆಟ್ಟಾ ತಿಳಿಸಿದ್ದಾರೆ.
“ನಮ್ಮ ಮಕ್ಕಳು ಅಪರೂಪದವು ಎನಿಸುತ್ತದೆ. ಇಂಥ ಭಿನ್ನ ಮಕ್ಕಳನ್ನು ಹೆತ್ತಿದ್ದಕ್ಕೆ ನಮಗೆ ಬಹಳ ಹೆಮ್ಮೆಯಿದೆ. ಆನ್ಲೈನ್ ಹೊರತುಪಡಿಸಿ ನಾವು ಈ ರೀತಿ ಅವಳಿಗಳನ್ನು ಎಲ್ಲೂ ನೋಡಿಲ್ಲ” ಎಂದು ಲಿಯೆಟ್ಟಾ ತಿಳಿಸಿದ್ದಾರೆ.