ಅಸಾಧಾರಣ ಎತ್ತರದ ವ್ಯತ್ಯಾಸದೊಂದಿಗೆ ಜಪಾನಿನ ಅವಳಿ ಸಹೋದರಿಯರು ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿದ್ದಾರೆ.
ಜಪಾನ್‌ನ ಒಕಾಯಾಮಾದಲ್ಲಿ ವಾಸಿಸುವ ಸಹೋದರಿ ಯೋಶಿ ಮತ್ತು ಮಿಚಿ ಕಿಕುಚಿ ನಡುವೆ 75 ಸೆಂ.ಮೀ (2 ಅಡಿ 5.5 ಇಂಚು) ಅಂತರವಿದೆ. ಇದು ದಿಗ್ಭ್ರಮೆಗೊಳಿಸುವಂತಿದೆ. ಅವಳಿ ಸಹೋದರಿಯರು ಈಗ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಅವಳಿಗಳು ಒಂದೇ ರೀತಿ ಕಾಣುವ ವ್ಯಕ್ತಿಗಳಾಗಿರಬೇಕೆಂದು ನಿರೀಕ್ಷಿಸಲಾಗುತ್ತೆ. ಆದರೆ 33 ವರ್ಷ ವಯಸ್ಸಿನ ಸಹೋದರಿಯರಿಗೆ, ಅವರ ಮುಖದ ವೈಶಿಷ್ಟ್ಯಗಳು ಮತ್ತು ಎತ್ತರವು ಅವರನ್ನು ಪ್ರತ್ಯೇಕಿಸುತ್ತದೆ. ಯೋಶಿ 162.5 cm (5 ಅಡಿ 4 in), ಮತ್ತು ಮಿಚಿ 87.5 cm (2 ಅಡಿ 10.5 in) ಎತ್ತರವಾಗಿದ್ದಾರೆ. ಇದು ಜಗತ್ತಿನ ಅದ್ಭುತಗಳಲ್ಲಿಒಂದು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.