
ಇಸ್ರೇಲ್‌ನ ಅಶ್ಡೋಡ್‌ನಲ್ಲಿ ನವಜಾತ ಶಿಶು ಗರ್ಭಿಣಿಯಾದ ಘಟನೆ ಆಘಾತ ತಂದಿದೆ. ಕೆಲವರು ಇದು ಪವಾಡವೆಂದ್ರೆ ಮತ್ತೆ ಕೆಲವರು ಅಸಹಜ ಘಟನೆ ಎನ್ನುತ್ತಿದ್ದಾರೆ. 5 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇದು ಕಾಣಿಸಿಕೊಳ್ಳಲಿದೆ.
ವರದಿಯ ಪ್ರಕಾರ, ನವಜಾತ ಶಿಶು ಈ ತಿಂಗಳು ಇಸ್ರೇಲ್ ನ ಅಶ್ಡೋಡ್ ನಲ್ಲಿರುವ ಅಸುತ ವೈದ್ಯಕೀಯ ಕೇಂದ್ರದಲ್ಲಿ ಜನಿಸಿತ್ತು. ನವಜಾತ ಶಿಶುವಿನ ಹೊಟ್ಟೆ ಇತರ ಮಕ್ಕಳಿಗಿಂತ ದೊಡ್ಡದಾಗಿತ್ತು. ನವಜಾತ ಶಿಶುವಿನ ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಮಾಡಿದಾಗ, ಮಗುವಿನ ಹೊಟ್ಟೆಯಲ್ಲಿ ಭ್ರೂಣವು ಬೆಳೆಯುತ್ತಿರುವುದು ಪತ್ತೆಯಾಗಿದೆ. ಭ್ರೂಣ ಕಳೆದ 10 ವಾರಗಳಿಂದ ಮಗುವಿನ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. 10 ವಾರಗಳಲ್ಲಿ ಭ್ರೂಣದ ಮೆದುಳು, ಹೃದಯ, ತೋಳುಗಳು ಮತ್ತು ಕಾಲುಗಳು ಬೆಳವಣಿಗೆ ಹೊಂದಿದ್ದವು. ತಜ್ಞರ ತಂಡ, ಶಸ್ತ್ರಚಿಕಿತ್ಸೆ ಮೂಲಕ ಭ್ರೂಣವನ್ನು ತೆಗೆದಿದೆ. ಈಗಾಗಲೇ ಎರಡು ಭ್ರೂಣ ತೆಗೆಯಲಾಗಿದೆ. ಇನ್ನೊಂದು ಭ್ರೂಣವಿರುವ ಶಂಕೆಯಿದೆ.
ಇಸ್ರೇಲ್ ನಲ್ಲಿ ಇದಕ್ಕೂ ಮುನ್ನ, ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾದ 7 ಘಟನೆಗಳು ವರದಿಯಾಗಿವೆ.