ಟಿವಿಎಸ್ ರೈಡರ್ 125, 2022 ರ ಭಾರತೀಯ ಮೋಟಾರ್‌ಸೈಕಲ್ ಕಿರೀಟವನ್ನು ಪಡೆದುಕೊಂಡಿದೆ. ಭಾರತೀಯ ದ್ವಿಚಕ್ರ ವಾಹನದ ಮಾರುಕಟ್ಟೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಟಿವಿಎಸ್ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ರೈಡರ್ ಜೊತೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಹೋಂಡಾ CB200X, ಯಮಹಾ FZ-X, ಬಜಾಜ್ ಪಲ್ಸರ್ F250 ಮತ್ತು ಬಜಾಜ್ ಪಲ್ಸರ್ N250 ಸೇರಿದಂತೆ ಇತರ ಮೋಟಾರ್ ಸೈಕಲ್‌ಗಳನ್ನು ಪ್ರಶಸ್ತಿಗಾಗಿ ನಾಮಿನೇಟ್ ಮಾಡಲಾಗಿತ್ತು. ಆದರೆ ಈ ಎಲ್ಲಾ ಬೈಕುಗಳನ್ನ ಹಿಂದಿಕ್ಕಿದ ರೈಡರ್ ಇಂಡಿಯನ್ ಮೋಟಾರ್ ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ ಬಾಚಿಕೊಂಡಿದೆ.
ಕೊರೊನಾಗೆ ತುತ್ತಾಗಿ 549 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರೋಗಿ ಕೊನೆಗೂ ಡಿಸ್ಚಾರ್ಜ್….!
ಈ ಪ್ರಶಸ್ತಿ ಯಾವ ಬೈಕಿಗೆ ಸೇರಬೇಕು ಎಂದು ನಿರ್ಧರಿಸುವ ಜವಾಬ್ದಾರಿ, 14 ಸದಸ್ಯರ ಜ್ಯೂರಿ ಮೇಲಿದೆ. ಪ್ರಶಸ್ತಿಯನ್ನು ಗೆಲ್ಲಲು ಮೋಟಾರ್ ಸೈಕಲ್‌ನ, ಸ್ಟೈಲ್, ಬೆಲೆ, ತಾಂತ್ರಿಕ ನಾವೀನ್ಯತೆ, ನಿರ್ಮಾಣ ಗುಣಮಟ್ಟ, ಇಂಧನ ಆರ್ಥಿಕತೆ, ಕಾರ್ಯಕ್ಷಮತೆ, ಪ್ರಾಯೋಗಿಕತೆ ಮತ್ತು ಭಾರತೀಯ ರೈಡಿಂಗ್ ಪರಿಸ್ಥಿತಿಗಳಿಗೆ ಸೂಕ್ತತೆಯ ವಿಷಯದಲ್ಲಿ ಜಡ್ಜ್ ಮಾಡಲಾಗುತ್ತದೆ. ಈ ಮೋಟಾರ್ ಸೈಕಲ್‌ಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಜ್ಯೂರಿಗಳಿಂದ ಯಾವುದು ಹೆಚ್ಚು ಅಂಕ ಪಡೆಯುತ್ತದೆ ಅದು ಪ್ರಶಸ್ತಿ ಪಡೆದುಕೊಳ್ಳುತ್ತದೆ.