ಟಿವಿಎಸ್ ಮೋಟಾರ್ ಕಂಪನಿ ತನ್ನ ಎನ್‌ಟಾರ್ಕ್ 125 ಸೂಪರ್ ಸ್ಕ್ವಾಡ್ ಎಡಿಶನ್‌ನ ಮಾರ್ವೆಲ್ ಸ್ಪೈಡರ್-ಮ್ಯಾನ್ ಮತ್ತು ಥಾರ್ ಥೀಂಗಳಲ್ಲಿ ಬಿಡುಗಡೆ ಮಾಡಲಿದೆ.
ಮಾರ್ವೆಲ್ ಸೂಪರ್ ಹೀರೋಗಳಾದ ಐರನ್ ಮ್ಯಾನ್, ಬ್ಲಾಕ್ ಪ್ಯಾಂಥರ್ ಮತ್ತು ಕ್ಯಾಪ್ಟನ್ ಅಮೆರಿಕಗಳ ಥೀಂನಲ್ಲಿ ಈ ಎಡಿಶನ್‌ನ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ. ಡಿಸ್ನಿ ಇಂಡಿಯಾ ಗ್ರಾಹಕ ಉತ್ಪನ್ನಗಳೊಂದಿಗೆ ಸಹಯೋಗದಲ್ಲಿರುವ ಟಿವಿಎಸ್ ತನ್ನ ಎನ್‌ಟಾರ್ಕ್ 125 ಸ್ಕೂಟರ್‌ನ ಸೂಪರ್‌ಸ್ಕ್ವಾಡ್ ವರ್ಶನ್‌ಗೆ ಹೊಸ ಥೀಂಗಳನ್ನು ತಂದಿದೆ.
ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!
2018ರಲ್ಲಿ ಬಿಡುಗಡೆಯಾದ ಈ ಸ್ಕೂಟರ್, ಬ್ಲೂಟೂತ್ ಸಂಪರ್ಕ ಹೊಂದಿರುವ ದೇಶದ ಮೊದಲ ಸ್ಕೂಟರ್ ಆಗಿದೆ. ಎನ್‌ಟಾರ್ಕ್ ಆರ್‌ಟಿ-ಫೈ ತಂತ್ರಜ್ಞಾನವನ್ನೂ ಹೊಂದಿದೆ. ಇದಕ್ಕೆ ಜೊತೆಯಾಗಿ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ತಂದಿದ್ದು, ಸೂಪರ್ ಹೀರೋ ಪಾತ್ರಗಳನ್ನು ಬಳಸಿಕೊಂಡು ಆಕರ್ಷಕ ಅನುಭೂತಿಯನ್ನು ತನ್ನ ಗ್ರಾಹಕರಿಗೆ ಕೊಡಮಾಡಿದೆ ಟಿವಿಎಸ್.
ಎನ್‌ಟಾರ್ಕ್ 125 ಸೂಪರ್‌ಸ್ಕ್ವಾಡ್ ಎಡಿಶನ್‌ನ ಆರಂಭಿಕ ಬೆಲೆ 84,850 ರೂ. (ಎಕ್ಸ್‌ಶೋರೂಂ ದೆಹಲಿ). ರೇಸಿಂಗ್ ಥೀಂನ ವಿನ್ಯಾಸ ಹೊಂದಿರುವ ಎನ್‌ಟಾರ್ಕ್ ಯುವಸಮುದಾಯದಲ್ಲಿ ತನ್ನದೇ ಸ್ಥಾನಮಾನ ಹೊಂದಿದೆ.