ಟಿವಿಎಸ್ ಕಂಪನಿಯು ಐಕ್ಯೂಬ್ (iQube) ಇ-ಸ್ಕೂಟರ್ ಬಿಡುಗಡೆ ಮಾಡಿದ್ದು, ಒಂದು ಚಾರ್ಜ್‌ನಲ್ಲಿ 140 ಕಿ.ಮೀ. ಓಡುವ ಜತೆಗೆ ಹಲವು ಆಕರ್ಷಕ ಸೌಲಭ್ಯಗಳನ್ನು ಹೊಂದಿದೆ ಎಂದು ಸಂಸ್ಥೆಯು ಘೋಷಿಸಿದೆ.
ಹೊಸ ಐ-ಕ್ಯೂಬ್ ಕ್ಲೀನ್ ಯುಐ ಸಹಿತವಾದ 7-ಇಂಚಿನ ಟಿಎಫ್‌ಟಿ ಟಚ್ ಸ್ಕ್ರೀನ್, ಅನಿಯಮಿತವಾದ ಥೀಮ್ ವೈಯಕ್ತೀಕರಣ, ವಾಯ್ಸ್ ಅಸಿಸ್ಟ್ ಮತ್ತು ಟಿವಿಎಸ್ ಐಕ್ಯೂಬ್ ಅಲೆಕ್ಸಾ ಹೊಂದಿದೆ ಎಂದು ವಿಎಸ್ ಮೋಟಾರ್ ಕಂಪನಿಯ ಎಂಡಿ ಸುದರ್ಶನ್ ವೇಣು ತಿಳಿಸಿದ್ದಾರೆ.
ದೇಶದ 3ನೇ ಅತಿ ದೊಡ್ಡ ಮೋಟಾರು ವಾಹನಗಳ ಉತ್ಪಾದಕ ಸಂಸ್ಥೆಯಾದ ಟಿವಿಎಸ್, ಐಕ್ಯೂಬ್ ಅನ್ನು 3 ವೈವಿಧ್ಯಗಳಲ್ಲಿ ಪರಿಚಯಿಸಿದೆ- TVS iQube, iQube S ಹಾಗೂ iQube ST. ದೆಹಲಿಯಲ್ಲಿ iQube S ಎಕ್ಸ್-ಶೋರೂಮ್ ಬೆಲೆ 1,08.690 ಆಗಿರುತ್ತದೆ.
iQube ST ಬೆಲೆಯನ್ನು ಅದು ಬಹಿರಂಗಗೊಳಿಸಿಲ್ಲ. ಕೇವಲ 999 ರೂ. ಮುಂಗಡ ನೀಡಿ ಬುಕ್ ಮಾಡಬಹುದು. ತಕ್ಷಣದ ವಿತರಣೆಗೆ ವಾಹನಗಳು ಲಭ್ಯವಿವೆ. TVS iQube ST ಮುಂಗಡ ಬುಕಿಂಗ್ ಮಾಡಿದವರಿಗಷ್ಟೇ ಲಭ್ಯವಿದೆ ಎಂದು ಕಂಪನಿ ಹೇಳಿದೆ.