ನವದೆಹಲಿ: ಟಿವಿ ಸುದ್ದಿ ವಾಹಿನಿಗಳಲ್ಲಿ ಚರ್ಚೆಯ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ವಕ್ತಾರರನ್ನು ಕರೆಸಿ ಚರ್ಚಾ ಕಾರ್ಯಕ್ರಮ ನಡೆಸಲಾಗುತ್ತದೆ. ಹೆಚ್ಚಾಗಿ, ಸುದ್ದಿ ಸ್ಟುಡಿಯೋಗಳಲ್ಲಿ ಏನಾಗುತ್ತದೆ ಎಂಬುದು ಸ್ಟುಡಿಯೋಗಳಲ್ಲಿ ಉಳಿಯುತ್ತದೆ. ಕೆಲವನ್ನಷ್ಟೇ ಪ್ರಸಾರ ಮಾಡಲಾಗುತ್ತದೆ.
ಇದೀಗ ಇಂಡಿಯಾ ಟುಡೆ ಆ್ಯಂಕರ್‌ಗಳಾದ ರಾಜ್‌ದೀಪ್ ಸರ್ದೇಸಾಯಿ, ಪ್ರೀತಿ ಚೌಧರಿ ಮತ್ತು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ನಡುವೆ ನಡೆದ ಮಾತಿನ ಚಕಮಕಿಯ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಇಂಡಿಯಾ ಟುಡೇ ಸುದ್ದಿ ವಾಹಿನಿ ನಿರೂಪಕಿ ಪ್ರೀತಿ ಚೌಧರಿ ಅವರೊಂದಿಗೆ ನಡೆದ ಬಿಸಿ ಬಿಸಿ ಚರ್ಚೆಯ ನಂತರ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ವಾಕ್ಸಮರ ನಡೆಸಿದ್ರು. ತಮ್ಮ 2 ನಿಮಿಷಗಳ ಖ್ಯಾತಿಯನ್ನು ಬಯಸುತ್ತಾರೆ ಎಂದು ವಕ್ತಾರರಿಗೆ ಆಂಕರ್ ತಿರುಗೇಟು ನೀಡಿದ್ರು. ಇದು ನಿರೂಪಕ ಮತ್ತು ವಕ್ತಾರರ ನಡುವೆ ಮಾತಿನ ಚಕಮಕಿ ಮತ್ತು ವಾಗ್ದಾಳಿಗೆ ಕಾರಣವಾಯಿತು.
ಶೆಹಜಾದ್ ಪೂನವಾಲಾ ಅವರು ಚರ್ಚೆಯ ವಿಡಿಯೋವನ್ನು ಮತ್ತು ಘಟನೆಯ ವಿವರಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡರು. ಅವರು ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ತಮ್ಮ ಮುಕ್ತಾಯದ ಹೇಳಿಕೆಗಳನ್ನು ನೀಡಲು ಅನುಮತಿಸಲಿಲ್ಲ ಎಂದು ಹೇಳಿದ್ರು. ಆಂಕರ್ ಪ್ರೀತಿ ಚೌಧರಿ ಕೂಡ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಚರ್ಚೆಯು ಕೂಗಾಟವಾಗಿ ಮಾರ್ಪಟ್ಟಿದ್ದಕ್ಕಾಗಿ ವೀಕ್ಷಕರಲ್ಲಿ ಕ್ಷಮೆಯಾಚಿಸಿದರು.