ಟಿವಿ ಆ್ಯಂಕರ್ ಒಬ್ಬರು ಸುದ್ದಿಯನ್ನು ಪ್ರಸ್ತುತಪಡಿಸುವ ಮಧ್ಯದಲ್ಲಿ ಎಡವುತ್ತಿರುವುದನ್ನು ತೋರಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಎನ್ ಬಿ ಸಿ ಯೂನಿವರ್ಸಲ್‌ನ ಪತ್ರಕರ್ತೆ ಜೂಲಿ ಚಿನ್ ಕಾಣಿಸಿಕೊಂಡಿದ್ದಾರೆ. ಈ ಘಟನೆಯು ತುಲ್ಸಾದ ಎನ್ ಬಿ ಸಿ ಸ್ಟುಡಿಯೋದಲ್ಲಿ ನಡೆದಿದೆ.
ಎನ್ ಬಿ ಸಿ ಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಹಂಚಿಕೊಂಡ ವಿಡಿಯೋದಲ್ಲಿ, ಜೂಲಿ ನಾಸಾದ ಇತ್ತೀಚಿನ ಉಡಾವಣೆಯ ಸುದ್ದಿಯನ್ನು ಪ್ರಸ್ತುತಪಡಿಸುತ್ತಿದ್ದರು. ಈ ವೇಳೆ ಆಕೆ ಸಾಕಷ್ಟು ಬಾರಿ ತೊದಲಿದ್ದಾಳೆ. ಜೂಲಿ ನಂತರ ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸುತ್ತಾಳೆ. ತನ್ನ ಸಹೋದ್ಯೋಗಿಯೊಬ್ಬರು ಪ್ರಸ್ತುತಪಡಿಸಿದ ಹವಾಮಾನ ವರದಿಗೆ ತನ್ನ ಸುದ್ದಿಯನ್ನು ವರ್ಗಾಯಿಸುತ್ತಾರೆ.
ಅಂದಹಾಗೆ, ತುಲ್ಸಾ ಸುದ್ದಿ ನಿರೂಪಕಿ ಜೂಲಿ ಚಿನ್ ಗೆ ಸ್ಟ್ರೋಕ್‌ನ ಅನುಭವವಾದಂತಾಗಿದೆ. ಏನೋ ತಪ್ಪಾಗಿದೆ ಎಂದು ಆಕೆಗೆ ತಿಳಿದಿತ್ತು. ಆದ್ದರಿಂದ ಆಕೆ ಕೂಡಲೇ ತಾನು ಓದಬೇಕಿದ್ದ ಸುದ್ದಿಯನ್ನು ಹವಾಮಾನಶಾಸ್ತ್ರಜ್ಞೆಗೆ ವರ್ಗಾಯಿಸಿದ್ದಾಳೆ. ಇದೀಗ ಜೂಲಿ ಆರೋಗ್ಯವಾಗಿದ್ದಾರೆ. ಆದರೆ, ಸ್ಟ್ರೋಕ್ ಎಚ್ಚರಿಕೆ ಚಿಹ್ನೆಗಳ ಬಗ್ಗೆ ವೀಕ್ಷಕರಿಗೆ ತಿಳಿಸುವ ಸಲುವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ಮೂವತ್ತೊಂಬತ್ತು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಾಳಜಿ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ.
ಜೂಲಿ ಚಿನ್ ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆಕೆ ಆರೋಗ್ಯವಾಗಿದ್ದು, ಶೀಘ್ರದಲ್ಲೇ ಕೆಲಸಕ್ಕೆ ಮರಳುವ ನಿರೀಕ್ಷೆಯಿದೆ. ಏನಾಗುತ್ತಿದೆ ಎಂಬುದನ್ನು ನೋಡಿದ ಮತ್ತು ತಕ್ಷಣ ಸಹಾಯಕ್ಕಾಗಿ ಕರೆ ಮಾಡಿದ ತನ್ನ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
https://twitter.com/HGiamarco/status/1566859812058681348?ref_src=twsrc%5Etfw%7Ctwcamp%5Etweetembed%7Ctwterm%5E1566859812058681348%7Ctwgr%5Ee1ce92dbd14a9d10dac19ca6c5eb2010d386ad89%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftv-anchor-fumbles-on-live-tv-after-experiencing-signs-of-stroke-video-goes-viral-1997555-2022-09-07