ಬಟ್ಟೆಗಳ ಮೇಲೆ ಯಾವುದೇ ಕಲೆ ಬಿದ್ದರೂ ಸುಲಭವಾಗಿ ತೆಗೆಯಬಹುದು. ಆದರೆ ಅರಿಶಿನದ ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ ಅರಿಶಿನ ಕಲೆಯನ್ನು ನಿವಾರಿಸುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಈ ಅರಿಶಿನ ಕಲೆಗಳನ್ನು ನಿವಾರಿಸಲು ಈ ವಿಧಾನ ಬಳಸಿ.
ಬಿಳಿ ಬಟ್ಟೆಗಳ ಮೇಲಿರುವ ಅರಿಶಿನದ ಕಲೆಗಳನ್ನು ನಿವಾರಿಸಲು ನಿಂಬೆ ರಸವನ್ನು ಹಚ್ಚಿ ಉಜ್ಜಿ. ನಂತರ ನೀರಿನಿಂದ ತೊಳೆದರೆ ಸ್ವಚ್ಛವಾಗುತ್ತದೆ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವಂತಹ ಟೂತ್ ಪೇಸ್ಟ್ ಅನ್ನು ಬಳಸಬಹುದು. ಇದು ಅರಿಶಿನದ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.