ಹಿಂದೂ ಧರ್ಮದಲ್ಲಿ ಅರಿಶಿನವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಎಲ್ಲ ಪೂಜೆಗಳಿಗೂ ಅರಿಶಿನ ಇರಲೇಬೇಕು, ಜ್ಯೋತಿಷ್ಯ ಶಾಸ್ತ್ರದಲ್ಲಿ ಅರಿಶಿನವನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಅರಿಶಿನವು ವಿಷ್ಣುವಿಗೆ ಪ್ರಿಯವಾದದ್ದು. ಅರಿಶಿನ ಅದೃಷ್ಟದ ಬಾಗಿಲು ತೆರೆಯಲು ನೆರವಾಗುವ ಜೊತೆಗೆ ದೃಷ್ಟಿ ದೋಷ ಪರಿಹಾರಕ್ಕೆ ಒಳ್ಳೆಯದು ಎಂದು ನಂಬಲಾಗಿದೆ. ಜಾತಕದಲ್ಲಿ ಗುರುವಿನ ಸ್ಥಾನವನ್ನು ಬಲಪಡಿಸಲು ಅರಿಶಿನ ತುಂಬಾ ಪರಿಣಾಮಕಾರಿ.
ಹಗಲಿರುಳು ಕೆಲಸ ಮಾಡಿದ್ರೂ ಫಲಿತಾಂಶ ಸಿಗ್ತಿಲ್ಲ ಎನ್ನುವವರು ಯಶಸ್ಸು ಗಳಿಸಲು ಬುಧವಾರ ಅಥವಾ ಗುರುವಾರದಂದು ಗಣಪತಿಗೆ ಅರಿಶಿನದ ಉಂಡೆಯ ಮಾಲೆಯನ್ನು ಅರ್ಪಿಸಬೇಕು. ಇದ್ರಿಂದ ಎಲ್ಲ ಸಮಸ್ಯೆ ಬಗೆಹರಿಯುತ್ತದೆ.
ಆರ್ಥಿಕ ವೃದ್ಧಿಗೆ ಹಾಗೂ ಸದಾ ಸಂಪತ್ತು ಮನೆಯಲ್ಲಿ ಇರಬೇಕು ಎನ್ನುವರು ಕೆಂಪು ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಕಟ್ಟಿ ಅದನ್ನು ಪ್ರತಿದಿನ ಪೂಜಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀ ಪ್ರಸನ್ನಳಾಗ್ತಾಳೆ. ಮನೆಯಲ್ಲಿ ಸುಖ, ಸಂಪತ್ತು ನೆಲೆಸಿರುತ್ತದೆ.
ದೀರ್ಘ ಕಾಲದಿಂದ ಕೆಲಸ ನಿಂತಿದ್ದು, ಹಣ ಕೈಗೆ ಬರ್ತಿಲ್ಲ ಎನ್ನುವವರು ಅಕ್ಕಿಗೆ ಅರಿಶಿನ ಹಚ್ಚಿ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ಸಿಕ್ಕಿಬಿದ್ದ ಹಣ ನಿಮಗೆ ಸಿಗುತ್ತದೆ.
ಕೆಟ್ಟ ಕನಸು ನಿಮ್ಮನ್ನು ಕಾಡ್ತಿದೆ ಎಂದಾದ್ರೆ ಅದಕ್ಕೂ ಅರಿಶಿನದಲ್ಲಿ ಪರಿಹಾರವಿದೆ. ಅರಿಶಿನದ ಉಂಡೆಯನ್ನು ಮಾಡಿ ಅದರ ಮೇಲೆ ಮಲ್ಲಿಗೆ ಹೂವನ್ನು ಇಡಬೇಕು. ನಂತ್ರ ಇದನ್ನು ತಲೆಯ ಬಳಿ ಇಟ್ಟು ಮಲಗಿಕೊಳ್ಳಿ. ಇದ್ರಿಂದ ದುಃಸ್ವಪ್ನ ಕಾಡುವುದಿಲ್ಲ.
ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳ ಮುಂದೆ ಪ್ರತಿದಿನ ಒಂದು ಚಿಟಿಕೆ ಅರಿಶಿನವನ್ನು ಅರ್ಪಿಸಿದರೆ ಎಲ್ಲ ಸಮಸ್ಯೆ ದೂರವಾಗುತ್ತದೆ. ಮದುವೆಗೆ ಬರ್ತಿರುವ ಅಡೆತಡೆ ನಿಲ್ಲುತ್ತದೆ. ದಂಪತಿ ಮಧ್ಯೆ ಇರುವ ಭಿನ್ನಾಭಿಪ್ರಾಯ ಕೊನೆಗೊಳ್ಳುತ್ತದೆ.