alex Certify ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು.

ಅರಿಶಿನ ಕೊಂಬನ್ನು ತೇದು ಮುಖಕ್ಕೆ ಹಚ್ಚಿ ತಣ್ಣೀರಿನಿಂದ ತೊಳೆಯುವುದರಿಂದ ಮೊಡವೆ ಸಮಸ್ಯೆಯಿಂದ ದೂರವಿರಬಹುದು. ಆದರೆ ಅರಿಶಿನ ಮುಖಕ್ಕೆ ಹಚ್ಚಿದ ಬಳಿಕ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.

ಅರಿಶಿನದೊಂದಿಗೆ ನಾಲ್ಕು ಚಮಚ ಮೊಸರು ಬೆರೆಸಿ ಹಚ್ಚಿಕೊಳ್ಳುವುದರಿಂದ ತ್ವಚೆ ಒಣಗುವುದನ್ನು ತಪ್ಪಿಸಬಹುದು.

ಅರಿಶಿನಕ್ಕೆ ಎರಡು ಚಮಚ ಲಿಂಬೆ ರಸ ಬೆರೆಸಿ ಹಚ್ಚಿಕೊಂಡರೆ ತ್ವಚೆ ಸ್ವಚ್ಛವಾಗುತ್ತದೆ.

ವಾರಕ್ಕೊಮ್ಮೆ ಕಡಲೆಹಿಟ್ಟಿಗೆ ತುಸು ಅರಿಶಿನ ಹಾಕಿ ಪೇಸ್ಟ್ ತಯಾರಿಸಿ ಹಚ್ಚಿಕೊಂಡರೆ ಮುಖ ಕಾಂತಿಯತವಾಗುತ್ತದೆ. ಇದು ಫೇಸ್ ಪ್ಯಾಕ್ ನಂತೆ ಕೆಲಸ ಮಾಡುತ್ತದೆ.

ಅರಿಶಿನಕ್ಕೆ ಜೇನು ಬೆರೆಸಿ ಹಚ್ಚಿಕೊಳ್ಳುವುದರಿಂದಲೂ ನಿಮ್ಮ ತ್ವಚೆ ಆಕರ್ಷಣೀಯವಾಗಿ ಕಾಣಿಸಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...