ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ 17 ವರ್ಷದ ವಿದ್ಯಾರ್ಥಿಯು ಸೆರೆಹಿಡಿದಿರುವ ಭೀಕರ ಕ್ಷಣಗಳು ಟರ್ಕಿ ದೇಶದ ಜನರ ಹೃದಯವನ್ನು ಕರಗಿಸಿದೆ. 17 ವರ್ಷದ ಪ್ರೌಢಶಾಲಾ ವಿದ್ಯಾರ್ಥಿಯು ಭೂಕಂಪದ ಸಮಯದಲ್ಲಿ ತನ್ನ ಮನೆಯ ಅವಶೇಷಗಳಡಿಯಲ್ಲಿ ಸಿಲುಕಿದ್ದಾಗ ತನ್ನ ಪ್ರೀತಿಪಾತ್ರರಿಗೆ ವಿದಾಯ ಸಂದೇಶವನ್ನು ಚಿತ್ರೀಕರಿಸಿದ ವಿಡಿಯೋ ವೈರಲ್ ಆಗ್ತಿದೆ.
ವಿದ್ಯಾರ್ಥಿ ತಾಹಾ ಎರ್ಡೆಮ್ ಮತ್ತು ಅವರ ಕುಟುಂಬವು ಫೆ.6 ರ ಮುಂಜಾನೆ ಅವರ ತವರು ಆದಿಯಮಾನ್ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗ ಗಾಢ ನಿದ್ದೆಯಲ್ಲಿದ್ದರು. ಈ ವೇಳೆ ಅವರು ವಾಸವಿದ್ದ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ಭೂಕಂಪದಿಂದ ಕುಸಿದು ಬಿತ್ತು .
ಕೇವಲ 10 ಸೆಕೆಂಡುಗಳಲ್ಲಿ, ತಾಹಾ, ಅವನ ತಾಯಿ, ತಂದೆ ಮತ್ತು ಕಿರಿಯ ಸಹೋದರ ಮತ್ತು ಸಹೋದರಿ ಕಟ್ಟಡದೊಂದಿಗೆ ಕೆಳಕ್ಕೆ ಬಿದ್ದರು. ಟನ್ಗಟ್ಟಲೆ ಕಲ್ಲುಮಣ್ಣುಗಳ ಅಡಿಯಲ್ಲಿ ಅವರು ಸಿಕ್ಕಿಬಿದ್ದರು.
ಈ ವೇಳೆ ತಾಹಾ ತನ್ನ ಸೆಲ್ಫೋನ್ ತೆಗೆದುಕೊಂಡು ಅಂತಿಮ ವಿದಾಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾನೆ. ತನ್ನ ಮರಣದ ನಂತರ ಫೋನ್ ಪತ್ತೆಯಾಗುತ್ತದೆ ಎಂದು ಆಶಿಸಿ, “ಇದು ನಾನು ನಿಮಗಾಗಿ ಚಿತ್ರೀಕರಣ ಮಾಡುವ ಕೊನೆಯ ವೀಡಿಯೊ ಎಂದು ನಾನು ಭಾವಿಸುತ್ತೇನೆ” ಎಂದು ತನ್ನ ಸುತ್ತಮುತ್ತ ಕಟ್ಟಡದ ಅವಶೇಷ ಬಿದ್ದ ಕಿರಿದಾದ ಜಾಗದಲ್ಲಿ ನಿಂತು ತಾಹಾ ವಿಡಿಯೋ ರೆಕಾರ್ಡ್ ಮಾಡಿದ್ದಾನೆ
“ನಾನು ಪಶ್ಚಾತ್ತಾಪಪಡುವ ಅನೇಕ ವಿಷಯಗಳಿವೆ, ದೇವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ, ನಾನು ಇಂದು ಜೀವಂತವಾಗಿ ಇಲ್ಲಿಂದ ಹೊರಬಂದರೆ ನಾನು ಮಾಡಲು ಬಯಸುವ ಅನೇಕ ಕೆಲಸಗಳಿವೆ, ನಾವು ಇನ್ನೂ ನಡುಗುತ್ತಿದ್ದೇವೆ, ಹೌದು, ನನ್ನ ಕೈ ಅಲುಗಾಡುತ್ತಿಲ್ಲ, ಇದು ಕೇವಲ ಭೂಕಂಪವಾಗಿದೆ.” ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಕೈ ಕಾಲನ್ನೂ ಆಡಿಸಲಾಗದೇ ಬದುಕಿಗಾಗಿ ಹಾತೊರೆಯುತ್ತಾ ನಡುಗುತ್ತಿದ್ದ ಕಟ್ಟಡದ ಅವಶೇಷಗಳ ಮಧ್ಯೆ ವಿಡಿಯೋ ಮಾಡಿದ್ದು ಇದೀಗ ಅದು ವೈರಲ್ ಆಗ್ತಿದೆ.
ನಾಶವಾದ ಕಟ್ಟಡದಿಂದ ತಾಹಾ ನನ್ನು ಎರಡು ಗಂಟೆಗಳ ನಂತರ ರಕ್ಷಿಸಲಾಯಿತು. ಭೂಕಂಪದ ಹತ್ತು ಗಂಟೆಗಳ ನಂತರ, ಅವನ ಹೆತ್ತವರು ಮತ್ತು ಒಡಹುಟ್ಟಿದವರನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದರು.
https://twitter.com/ElRaf67/status/1627037896635998210?ref_src=twsrc%5Etfw%7Ctwcamp%5Etweetembed%7Ctwterm%5E1627037896635998210%7Ctwgr%5Eeed71bf1e7ca11b74fec567a923f9d0409a30a57%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fturkish-teen-filmed-last-moments-from-earthquake-hit-apartment-2336622-2023-02-19