ಅಮೆರಿಕಾದ ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡ್ತಿದ್ದ ಟರ್ಕಿ ಮೂಲದ ರೂಮೇಸಾ ಓಜ್ಟರ್ಕ್ ಎಂಬ ಹುಡುಗಿಯನ್ನ ಅಮೆರಿಕಾದ ಗೃಹಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಸೋಮರ್ವಿಲ್ಲೆಯಲ್ಲಿರುವ ತನ್ನ ಮನೆ ಹತ್ತಿರದಿಂದ ಹೊರಬಂದಾಗ ಮುಖ ಮುಚ್ಚಿಕೊಂಡಿದ್ದ ಆರು ಜನ ಅಧಿಕಾರಿಗಳು ಅವಳ ಫೋನ್ ಕಸಿದುಕೊಂಡು, ಕೈಗೆ ಬೇಡಿ ಹಾಕಿ ಕರೆದುಕೊಂಡು ಹೋಗಿದ್ದಾರೆ. “ನಾವು ಪೊಲೀಸರು” ಅಂತ ಮಾತ್ರ ಹೇಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಘಟನೆ ಬಗ್ಗೆ ವಕೀಲ ಮಹ್ಸಾ ಖಾನ್ಬಾಬಾಯಿ ಬೋಸ್ಟನ್ ಫೆಡರಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. “ಅವಳನ್ನ ಯಾಕೆ ಬಂಧಿಸಿದ್ದಾರೆ ಅಂತ ನಮಗೂ ಗೊತ್ತಿಲ್ಲ, ಅವಳ ಮೇಲೆ ಯಾವ ಕೇಸೂ ಇಲ್ಲ. ಅಮೆರಿಕಾದಲ್ಲಿ ಓದೋಕೆ ಅವಳಿಗೆ ವೀಸಾ ಇದೆ” ಅಂತ ವಕೀಲರು ಹೇಳಿದ್ದಾರೆ.
ಈ ಘಟನೆ ನೆರೆಹೊರೆಯವರಲ್ಲಿ ಆತಂಕ ಮೂಡಿಸಿದೆ. “ಇದು ಕಿಡ್ನ್ಯಾಪ್ ತರ ಇತ್ತು” ಅಂತ ಸಾಫ್ಟ್ವೇರ್ ಇಂಜಿನಿಯರ್ ಮೈಕೆಲ್ ಮ್ಯಾಥಿಸ್ ಹೇಳಿದ್ದಾರೆ. ಟಫ್ಟ್ಸ್ ವಿಶ್ವವಿದ್ಯಾಲಯದ ಅಧ್ಯಕ್ಷ ಸುನಿಲ್ ಕುಮಾರ್, “ಈ ಘಟನೆ ಬಗ್ಗೆ ನಮಗೂ ಮೊದಲೇ ಗೊತ್ತಿರಲಿಲ್ಲ. ಅವಳ ವೀಸಾನೂ ರದ್ದಾಗಿದೆ” ಅಂತ ಹೇಳಿದ್ದಾರೆ. ಡೆಮಾಕ್ರಟಿಕ್ ಯುಎಸ್ ಪ್ರತಿನಿಧಿ ಅಯನ್ನಾ ಪ್ರೆಸ್ಲಿ, “ಇದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ, ಅವಳನ್ನ ಬಿಡುಗಡೆ ಮಾಡಿ” ಅಂತ ಒತ್ತಾಯಿಸಿದ್ದಾರೆ.
ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಇಂದಿರಾ ತಲ್ವಾನಿ, “ಅವಳನ್ನ ಯಾಕೆ ಬಂಧಿಸಿದ್ದೀರಾ ಅಂತ ಶುಕ್ರವಾರದೊಳಗೆ ಹೇಳಿ” ಅಂತ ಸರ್ಕಾರಕ್ಕೆ ಆದೇಶ ನೀಡಿದ್ದಾರೆ. “48 ಗಂಟೆಗಳ ಮೊದಲೇ ಹೇಳದೆ ಅವಳನ್ನು ಮ್ಯಾಸಚೂಸೆಟ್ಸ್ ಇಂದ ಹೊರಗೆ ಕಳಿಸಬೇಡಿ” ಅಂತಾನೂ ಹೇಳಿದ್ದಾರೆ. ಆದ್ರೆ ಈಗ ಅವಳನ್ನ ಲೂಸಿಯಾನದ ದಕ್ಷಿಣ ಲೂಯಿಸಿಯಾನ ಐಸಿಇ ಪ್ರಕ್ರಿಯೆ ಕೇಂದ್ರದಲ್ಲಿ ಇರಿಸಿದ್ದಾರೆ ಅಂತ ಸುದ್ದಿ ಬಂದಿದೆ.
ಹಿರಿಯ ಡಿಎಚ್ಎಸ್ ವಕ್ತಾರರು, “ಅವಳು ಅಮೆರಿಕನ್ನರನ್ನು ಕೊಲ್ಲುವುದನ್ನು ಆನಂದಿಸುವ ಹಮಾಸ್ ಎಂಬ ಭಯೋತ್ಪಾದಕ ಸಂಘಟನೆಗೆ ಸಪೋರ್ಟ್ ಮಾಡ್ತಿದ್ದಳು. ವೀಸಾ ಅಂದ್ರೆ ರೈಟ್ಸ್ ಅಲ್ಲ, ಅದು ಒಂದು ಸವಲತ್ತು. ಭಯೋತ್ಪಾದಕರಿಗೆ ಸಪೋರ್ಟ್ ಮಾಡಿದರೆ ವೀಸಾ ಕ್ಯಾನ್ಸಲ್ ಮಾಡ್ತೀವಿ” ಅಂತ ಹೇಳಿದ್ದಾರೆ.
ಕಳೆದ ಮಾರ್ಚ್ನಲ್ಲಿ ಟಫ್ಟ್ಸ್ ಡೈಲಿಯಲ್ಲಿ ವಿಶ್ವವಿದ್ಯಾಲಯದ ಸಮುದಾಯ ಒಕ್ಕೂಟದ ಸೆನೆಟ್ ಅಂಗೀಕರಿಸಿದ ನಿರ್ಣಯಗಳಿಗೆ ಟಫ್ಟ್ಸ್ ಪ್ರತಿಕ್ರಿಯೆಯನ್ನು ಟೀಕಿಸಿ ರೂಮೇಸಾ ಮತ್ತು ನಾಲ್ವರು ವಿದ್ಯಾರ್ಥಿಗಳು ಆರ್ಟಿಕಲ್ ಬರೆದಿದ್ರು. ಅದರಲ್ಲಿ ಇಸ್ರೇಲ್ ವಿರುದ್ಧ ಮಾತನಾಡಿದ್ರಂತೆ. ಅದಾದ್ಮೇಲೆ “ಅವಳು ಇಸ್ರೇಲ್ ದ್ವೇಷ ಮಾಡ್ತಾಳೆ” ಅಂತ ಒಂದು ವೆಬ್ಸೈಟ್ನಲ್ಲಿ ಅವಳ ಬಗ್ಗೆ ಹಾಕಿದ್ರಂತೆ.
ಇತ್ತೀಚೆಗೆ ಪ್ಯಾಲೆಸ್ತೀನ್ ಗೆ ಸಪೋರ್ಟ್ ಮಾಡಿದಕ್ಕೆ ತುಂಬಾ ಜನ ವಿದೇಶಿ ವಿದ್ಯಾರ್ಥಿಗಳ ವೀಸಾ ಕ್ಯಾನ್ಸಲ್ ಆಗಿದೆ. ಇದರ ವಿರುದ್ಧ ತುಂಬಾ ಜನ ಪ್ರತಿಭಟನೆ ಮಾಡ್ತಿದ್ದಾರೆ. “ರೂಮೇಸಾನ ಬಿಡಿ” ಅಂತ ಕೂಗ್ತಿದ್ದಾರೆ. ಈ ಸುದ್ದಿ ಈಗ ಅಮೆರಿಕಾದಲ್ಲಿ ದೊಡ್ಡ ಚರ್ಚೆಯಾಗ್ತಿದೆ.
This is reportedly video footage of Tufts international graduate student, Rumeysa Ozturk, being detained by federal agents after her student visa was revoked: https://t.co/jR6K5IB9aR pic.twitter.com/suAtmSglTY
— Steve McGuire (@sfmcguire79) March 26, 2025
Masked thugs remove a student at Tufts U because she expressed ideas unpopular with the current administration. https://t.co/nOTIAVEgHZ
— Steve Sills 💙 (@SteveSills) March 27, 2025
The footage of Rumeysa Ozturk’s arrest – a student here legally – is disturbing. My office is closely monitoring this matter as it develops. pic.twitter.com/LTuoWOu2Ca
— AG Andrea Joy Campbell (@MassAGO) March 26, 2025