
ಟರ್ಕಿಶ್ ಮಾಡೆಲ್ ಒಬ್ಬಳ ಬಾಯಿಯನ್ನು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ, ಕಿಸ್. ಕಿಸ್ ಕೊಡುವಾಗ ಆದ ಎಡವಟ್ಟಿನಿಂದ ಈ ಮಾಡೆಲ್ ಈಗ ಆಪರೇಷನ್ಗೆ ಒಳಗಾಗಬೇಕಿದೆ. ಇದನ್ನು ಖುದ್ದು ಈ ಮಾಡೆಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಮೊದಲ ಚುಂಬನದ ನಂತರ ಆಪರೇಷನ್ಗೆ ಒಳಗಾಗಬೇಕಾಯಿತು ಎಂದಿದ್ದಾಳೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮಾಡೆಲ್ ಸೆಯ್ಡಾ ತನ್ನ ಪ್ರಿಯಕರನಿಗೆ ಚುಂಬಿಸಿದ್ದಾಳೆ. ಇದು ಅವರ ಮೊದಲ ಚುಂಬನ. ಪ್ರೀತಿಯ ಅಮಲಿನಲ್ಲಿ ಪ್ರಿಯಕರ ಈಕೆಯ ನಾಲಿಗೆಯನ್ನು ಬಲವಾಗಿ ಕಚ್ಚಿದ್ದಾನೆ. ಅದು ಹರಿದು ಹೋಗಿದೆ. ನೋವಿನಿಂದ ಚೀರಿಕೊಂಡ ಈ ಮಾಡೆಲ್ ಸೆಯ್ಡಾ ಹಾಸಿಗೆಯಿಂದ ನೇರವಾಗಿ ಆಸ್ಪತ್ರೆಗೆ ಹೋಗಿದ್ದಾಳೆ.
ಅಲ್ಲಿಂದಲೇ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. 34 ವರ್ಷದ ಈ ಮಾಡೆಲ್ ವಿಡಿಯೋದಲ್ಲಿ, “ಮುತ್ತಿನ ಸಮಯದಲ್ಲಿ ನಾಲಿಗೆಯನ್ನು ಕಿತ್ತುಕೊಂಡಿರುವುದು ನನಗೆ ಮಾತ್ರವೇ?” ಎಂದು ಪ್ರಶ್ನಿಸಿದ್ದಾಳೆ. ಇನ್ಸ್ಟಾಗ್ರಾಮ್ನಲ್ಲಿ ಆರುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿರುವ ಈಕೆಯ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ಮಾಡಿದ್ದಾರೆ. ಆಪರೇಷನ್ ಬಳಿಕ ತಾನು ಈಗ ಆರೋಗ್ಯದಿಂದ ಇದ್ದಿರುವುದಾಗಿ ಮಾಡೆಲ್ ಹೇಳಿದ್ದಾಳೆ.