![](https://kannadadunia.com/wp-content/uploads/2023/02/turkey.png)
ನವದೆಹಲಿ: ಪ್ರಬಲ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ದೇಶಗಳು ತತ್ತರಿಸಿಹೋಗಿದ್ದು, ಉಭಯ ದೇಶಗಳಿಗೆ ಭಾರತ ಸರ್ಕಾರದಿಂದ ಹಣದ ನೆರವು ನೀಡಲಾಗಿದೆ.
ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಭಾರತ ಹಣದ ನೆರವು ನೀಡಿದೆ. ಉಭಯ ದೇಶಗಳ ಸಂತ್ರಸ್ತರು ಮತ್ತು ರಕ್ಷಣಾ ಕಾರ್ಯಕ್ಕೆ ಭಾರತ ನೆರವಾಗಿದೆ. ಭಾರತದ ನೆರವಿಗೆ ಟರ್ಕಿ ಧನ್ಯವಾದ ತಿಳಿಸಿದ್ದು, ಭಾರತ ನಮ್ಮ ಪಾಲಿಗೆ ಆಪ್ತಮಿತ್ರ ಎಂದು ಟರ್ಕಿ ಸರ್ಕಾರ ಹೇಳಿದೆ.
ಸೋಮವಾರ ಮುಂಜಾನೆ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪವು 3,400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಸಾವಿರಾರು ಕಟ್ಟಡಗಳನ್ನು ಉರುಳಿಸಿದೆ. ಭಾರತ ಭೂಕಂಪ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ಟರ್ಕಿ ಧನ್ಯವಾದ ತಿಳಿಸಿದೆ.