ಗಣೇಶ ಚತುರ್ಥಿ ಆಚರಣೆ ವೇಳೆ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿರೋ ಘಟನೆ ಗುಜರಾತ್‌ನ ಸೂರತ್ ರಾಜ್ಯದ ಪರ್ವತ ಪಾಟಿಯಾ ಪ್ರದೇಶದಲ್ಲಿ ನಡೆದಿದೆ.
ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯು ಅಪಾಯಕಾರಿ ಸಾಹಸವನ್ನು ಮಾಡಲು ಪ್ರಯತ್ನಿಸುತ್ತಿದ್ದ. ದಹಿಸುವ ವಸ್ತುವನ್ನು ಬಳಸಿ ತನ್ನ ಬಾಯಿಯಿಂದ ಅದನ್ನು ಗಾಳಿಯಲ್ಲಿ ಹೊರಬಿಡಬೇಕಾಗಿತ್ತು. ಇದನ್ನು ಮಾಡುವಾಗ ಆಕಸ್ಮಿಕವಾಗಿ ಆತನ ಮೈಗೆ ಬೆಂಕಿ ತಗುಲಿದೆ.
ವ್ಯಕ್ತಿಯು ಗುಂಪಿನ ಮುಂದೆ ವಿಫಲವಾದ ಸಾಹಸವನ್ನು ಪ್ರದರ್ಶಿಸುತ್ತಿರುವಾಗ ಇನ್ನೊಬ್ಬ ವ್ಯಕ್ತಿ ಕಾರ್ಯಕ್ರಮವನ್ನು ರೆಕಾರ್ಡ್ ಮಾಡುವುದನ್ನು ಕಾಣಬಹುದು. ಆತ ತನ್ನ ಬಾಯಿಯೊಳಗೆ ಹಾಕುವ ಸುಡುವ ವಸ್ತುವಿನಿಂದ ಉಗುಳುತ್ತಾನೆ. ಆದರೆ ಆಕಸ್ಮಿಕವಾಗಿ ಬೆಂಕಿ ಆತನ ಮೈಯನ್ನು ಹತ್ತಿಕೊಂಡಿದೆ. ಸಾಹಸದ ಸಮಯದಲ್ಲಿ ಅವನ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಆತನ ರಕ್ಷಣೆಗೆ ಮುಂದಾಗಿದ್ದಾನೆ. ಸ್ಟಂಟ್ ಸಮಯದಲ್ಲಿ ಬೇಗನೇ ಆತನ ಟೀ ಶರ್ಟ್ ಅನ್ನು ತೆಗೆಯಲು ಆ ವ್ಯಕ್ತಿಯು ಸಹಾಯ ಮಾಡಿದ್ದಾನೆ.
ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಸೂರತ್‌ನ ಪರ್ವತ ಪಟಿಯಾ ಪ್ರದೇಶದಲ್ಲಿ ಸುಡುವ ವಸ್ತುಗಳನ್ನು ಬಳಸಿ ತನ್ನ ಬಾಯಿಂದ ಬೆಂಕಿಯನ್ನು ಉಗುಳುವ ಸಾಹಸ ಮಾಡುವಾಗ ಯುವಕನೊಬ್ಬನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ಶೀರ್ಷಿಕೆ ನೀಡಲಾಗಿದೆ.