ನಟಿ ತನಿಶಾ ಶರ್ಮಾ ನಿಗೂಢ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ನಟಿ ಗರ್ಭಿಣಿ ಎಂಬ ಊಹಾಪೋಹ ಕೂಡ ಅವರ ಸಾವಿನ ವೇಳೆ ಹಬ್ಬಿತ್ತು.
ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಿಜಾಂಶ ಬಯಲಾಗಿದೆ. ನಟಿ ತನಿಶಾ ಶರ್ಮಾ ಗರ್ಭಿಣಿಯಲ್ಲ, ನೇಣು ಬಿಗಿದುಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.
20 ವರ್ಷದ ನಟಿ ತನಿಶಾ ಡಿಸೆಂಬರ್ 24 ರಂದು ತನ್ನ ಮಾಜಿ ಗೆಳೆಯ ಮತ್ತು ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಬ್ಬರೂ ‘ಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್’ ಶೋನಲ್ಲಿ ಕಾಣಿಸಿಕೊಂಡಿದ್ದರು.
ನಟಿಯ ಸಾವಿನ ಬಳಿಕ ಶೀಜನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ತುನಿಶಾಳ ತಾಯಿ ಔಪಚಾರಿಕ ದೂರು ನೀಡಿದ್ದು, ತುನಿಶಾಳ ಮಾನಸಿಕ ಒತ್ತಡಕ್ಕೆ ನಟನನ್ನೇ ದೂಷಿಸಿದ್ದಾರೆ.
ಆಕೆಯ ಮೃತದೇಹವನ್ನು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿಗಳ ಪ್ರಕಾರ ತುನಿಶಾಳ ಸಾವು ಉಸಿರುಗಟ್ಟುವಿಕೆಯಿಂದ ಸಂಭವಿಸಿದೆ.
ಆಕೆಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ. ವರದಿಗಳ ಪ್ರಕಾರ ಆಕೆಯ ಪಾರ್ಥಿವ ಶರೀರವನ್ನು ಡಿಸೆಂಬರ್ 26 ರಂದು ಅಂತ್ಯಸಂಸ್ಕಾರ ಮಾಡುವ ಸಾಧ್ಯತೆಯಿದೆ.