ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಆರೋಪಿ ಶೀಜಾನ್ ಖಾನ್ ಪೊಲೀಸ್ ಕಸ್ಟಡಿ ಅವಧಿಯನ್ನ ಮತ್ತೆರಡು ದಿನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ವಸಾಯಿ ನ್ಯಾಯಾಲಯವು ಶೀಜಾನ್ ಖಾನ್ ಪೊಲೀಸ್ ಕಸ್ಟಡಿಯನ್ನು ಶುಕ್ರವಾರದವರೆಗೆ ವಿಸ್ತರಿಸಿ ಪೊಲೀಸಾ ಕಸ್ಟಡಿಗೆ ನೀಡಿದೆ.
ಮಹಾರಾಷ್ಟ್ರದ ವಸಾಯಿ ನ್ಯಾಯಾಲಯವು ಭಾನುವಾರ ಶೀಜನ್ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು
ನಟಿ ತುನೀಶಾ ಶನಿವಾರ ಅಲಿಬಾಬಾ – ದಸ್ತಾನ್-ಎ-ಕಾಬೂಲ್ನ ಟಿವಿ ಶೋ ಸೆಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಒಂದು ದಿನದ ನಂತರ ಆಕೆಯ ಮಾಜಿ ಗೆಳೆಯ ಮತ್ತು ಕಾರ್ಯಕ್ರಮದ ಸಹ-ನಟ, ಶೀಜಾನ್ ನನ್ನು ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ಬಂಧಿಸಲಾಯಿತು. ಪೊಲೀಸರ ಪ್ರಕಾರ, ತುನಿಶಾ ಮತ್ತು ಶೀಜನ್ ಸಾಯುವ 15 ದಿನಗಳ ಮೊದಲು ಬೇರ್ಪಟ್ಟಿದ್ದರು.
ಮುಂಬೈನ ಮೀರಾ ರೋಡ್ ಸ್ಮಶಾನ ಮೈದಾನದಲ್ಲಿ 20 ವರ್ಷದ ತುನಿಶಾಗೆ ಸಂಬಂಧಿಕರು, ಸ್ನೇಹಿತರಿಂದ ಕಣ್ಣೀರಿನ ಬೀಳ್ಕೊಡುಗೆ ನೀಡಲಾಯಿತು. ವಿಶಾಲ್ ಜೇತ್ವಾ, ಅಶ್ನೂರ್ ಕೌರ್, ಅವನೀತ್ ಕೌರ್ ಮತ್ತು ಶಿವಿನ್ ನಾರಂಗ್ ಸೇರಿದಂತೆ ಗಣ್ಯರು ತುನಿಶಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.