ಕೊಪ್ಪಳ: ತುಂಗಭದ್ರಾ ಡ್ಯಾಂ ಮೇಲೆ ನವಜೋಡಿಯೊಂದು ಪ್ರೀ ವೆಡ್ದಿಂಗ್ ಫೋಟೋಶೂಟ್ ಮಾಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನಿಷೇಧವಿದ್ದರೂ ಅಧಿಕಾರಿಗಳು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.
ಭದ್ರತಾ ಕಾರಣಕ್ಕಾಗಿ ತುಂಗಭದ್ರಾ ಜಲಾಸಯ ಮೇಲೆ ಯಾವುದೇ ಫೋಟೋ ತೆಗೆಯಲು, ವಿಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಆದಾಗ್ಯೂ ಜೋಡಿಯೊಂದು ಕಾರಿನಲ್ಲಿ ತೆರಳಿ ಪ್ರೀ ವೆಡ್ದಿಂಗ್ ಫೋಟೋಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕೂಡ ವೈರಲ್ ಆಗಿದೆ.
ಬೆಂಗಳೂರು ಪಾಸಿಂಗ್ ಕಾರನ್ನು ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಕಾರಿನ ಮೇಲೆ, ಕಾರಿನ ಮುಂಭಾಗ ಜೋಡಿಗಳ ಫೋಟೋಶೂಟ್ ಮಾಡಲಾಗಿದೆ. ನಿಷೇಧವಿದ್ದರೂ ಟಿಬಿ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಅನುಮತಿ ನೀಡಿದ್ದು ಯಾರು? ಅಧಿಕಾರಿಗಳೇ ಅನುಮತಿ ನೀಡಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.