alex Certify BIG NEWS: ಕೆ.ಆರ್.ಎಸ್ ಡ್ಯಾಂ ಗೂ ಸ್ಟಾಫ್ ಲಾಕ್ ಗೇಟ್ ಇಲ್ಲ; ಈಗಲೇ ಸರಿಪಡಿಸುವುದು ಒಳಿತು: ಹೆಚ್.ಡಿ.ಕೆ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆ.ಆರ್.ಎಸ್ ಡ್ಯಾಂ ಗೂ ಸ್ಟಾಫ್ ಲಾಕ್ ಗೇಟ್ ಇಲ್ಲ; ಈಗಲೇ ಸರಿಪಡಿಸುವುದು ಒಳಿತು: ಹೆಚ್.ಡಿ.ಕೆ ಎಚ್ಚರಿಕೆ

ಮಂಡ್ಯ: ತುಂಗಭದ್ರಾ ಡ್ಯಾಂ ನ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟಾಗಿ ಅವಘಡ ಸಂಭವಿಸಿರುವ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೆ.ಆರ್.ಎಸ್ ಡ್ಯಾಂ ಗೂ ಸ್ಟಾಫ್ ಲಾಕ್ ಗೇಟ್ ಇಲ್ಲ. ಈ ಬಗ್ಗೆ ಈಗಲೇ ಗಮನಹರಿಸುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಕೆ.ಆರ್.ಎಸ್.ಡ್ಯಾಂ ಕಟ್ಟುವಾಗ ಸ್ಟಾಫ್ ಲಾಕ್ ಗೇಟ್ ಹಾಕಿಲ್ಲ. ಈಗ ತುಂಗಭದ್ರಾ ಡ್ಯಾಂ ಪರಿಸ್ಥಿತಿ ಗಮನಿಸಿದರೆ ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು. ದೂರದೃಷ್ಟಿಯಿಂದ ಕೆ.ಆರ್.ಎಸ್ ಗೆ ಸ್ಟಾಫ್ ಲಾಕ್ ಹಾಕಬೇಕು ಎಂದು ಹೇಳಿದರು.

70 ವರ್ಷಗಳ ಹಿಂದೆಯೇ ತುಂಗಭದ್ರಾ ಡ್ಯಾಂ ಕಟ್ಟಲಾಗಿದೆ. ನಾಅರಾಯಣಪುರ, ಆಲಮಟ್ಟಿ ಜಲಾಶಯಗಳಲ್ಲಿ ಸ್ಟಾಫ್ ಲಾಕ್ ಗೇಟ್ ಅಳವಡಿಸಲಾಗಿದೆ. ಆದರೆ ತುಂಗಭದ್ರಾ ಡ್ಯಾಂಗೆ ಅಳವಡಿಸಿಲ್ಲ. ಹಾಗಾಗಿ ಗೇಟ್ ಕೊಚ್ಚಿ ಹೋದಾಗ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ. 30 ಸಾವಿರ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಜಲಾಶಯದಿಂದ 60 ಟಿಎಂಸಿ ನೀರು ಖಾಅಲಿಯಾಗುತ್ತದೆ. ಇದು ರೈತರ ಬದುಕಿನ ಆಶಾಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ. ಟಿ.ಬಿ.ಬೋರ್ಡ್ ತಾಂತ್ರಿಕ ವಿಚಾರವಾಗಿ ಕಾಟಾಚಾರಕ್ಕೆ ವರದಿ ನೀಡಿದೆ. ಇದನ್ನು ಸರಿಪಡಿಸಿಕೊಳ್ಳಬೇಕು. ರೈತರ ಬದುಕಿನ ಜೊತೆ ಚಲ್ಲಾಟ ಸರಿಯಲ್ಲ. ಇತ್ತ ಕೆ.ಆರ್.ಎಸ್ ಡ್ಯಾಂ ಬಗ್ಗೆಯೂ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...