ಅಂತರ್ಜಾಲದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಂಗ್ಲಾದೇಶದ ಗಾಯಕ, ನಟ ಅಲೋಮ್ ಅವರನ್ನು ಪೊಲೀಸರು ಎಳೆದೊಯ್ದು, ಹಾಡು ಹಾಡುವುದಕ್ಕೆ ನಿರ್ಬಂಧ ಹೇರಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಂತರ್ಜಾಲದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಂಗ್ಲಾದೇಶದ ಗಾಯಕ, ನಟ ಅಲೋಮ್ ಅವರನ್ನು ಪೊಲೀಸರು ಎಳೆದೊಯ್ದು ಔಟ್ ಆಫ್ ಟ್ಯೂನ್ ಹಾಡುವುದನ್ನು ನಿಲ್ಲಿಸಲು ಸೂಚಿಸಿದ್ದಾರೆ.
ರವೀಂದ್ರನಾಥ ಟ್ಯಾಗೋರ್ ಮತ್ತು ಬಾಂಗ್ಲಾದೇಶದ ಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಹಾಡುಗಳ ನಿರೂಪಣೆಗಾಗಿ ಸಾಕಷ್ಟು ಟೀಕೆಗೂ ಒಳಗಾಗಿದ್ದರು.
ಮಾಧ್ಯಮ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಅಲೋಮ್, ಕಳೆದ ವಾರ ಪೊಲೀಸರು ಮಾನಸಿಕವಾಗಿ ಹಿಂಸೆ ನೀಡಿದರು. ಕ್ಲಾಸಿಕಲ್ ಹಾಡುಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು. ಕ್ಷಮಾಪಣೆ ಬಾಂಡ್‌ಗೆ ಸಹಿ ಹಾಕಲು ಸಹ ಒತ್ತಾಯಿಸಿದ್ದರು ಎಂದರು.
ಪೊಲೀಸರು ನನ್ನನ್ನು ಬೆಳಿಗ್ಗೆ 6 ಗಂಟೆಗೆ ಕರೆದೊಯ್ದು ಎಂಟು ಗಂಟೆಗಳ ಕಾಲ ಇರಿಸಿಕೊಂಡಿದ್ದರು. ನಾನು ರವೀಂದ್ರನಾಥ್ ಠ್ಯಾಗೋರ್ ಮತ್ತು ನಜ್ರುಲ್ ಹಾಡುಗಳನ್ನು ಏಕೆ ಹಾಡುತ್ತೇನೆ ಎಂದು ಪ್ರಶ್ನಿಸಿದ್ದರು ಎಂದಿದ್ದಾರೆ.
ಅಲೋಮ್ ವಿಡಿಯೊಗಳಲ್ಲಿ ಅನುಮತಿಯಿಲ್ಲದೆ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವೈಯಕ್ತಿಕ ಹಕ್ಕುಗಳ ಮೇಲಿನ ದಾಳಿ ಎಂದು ಟೀಕಿಸಿದ್ದಾರೆ. ಆದರೆ ಹಾಡುಗಳನ್ನು ತಿರುಚಲಾಗುತ್ತಿದೆ ಎಂಬ ಗುರುತರ ಆರೋಪ ಅವರ ಮೇಲಿದೆ
ಅಲೋಮ್ ಅವರು ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಾಂಗ್ಲಾದೇಶದ ಸಂಸತ್ತಿನ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಅಲೋಮ್ ಸುಮಾರು ಎರಡು ಮಿಲಿಯನ್ ಫೇಸ್‌ಬುಕ್ ಫಾಲೋಯರ್‌ಗಳನ್ನು ಹೊಂದಿದ್ದು, ಯೂಟ್ಯೂಬ್‌ನಲ್ಲಿ ಸುಮಾರು 1.5 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.