ನವದೆಹಲಿ: ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾಗುತ್ತಿದ್ದಂತೆ ತುಮಕೂರು ಜಿಲ್ಲೆಗೆ ಭರಪೂರ ಕೊಡುಗೆ ಹರಿದು ಬರುತ್ತಿವೆ.
ಕಳೆದ ತಿಂಗಳು 350 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿತ್ತು. ಇದೀಗ ಮತ್ತೆ 60 ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನ ಮೂರು ರೈಲ್ವೆ ಕಾಮಗಾರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ತುಮಕೂರಿನ ಕಲ್ಲಿಪಾಳ್ಯ ರಸ್ತೆ ಕೆಳ ಸೇತುವೆಗೆ 13.44 ಕೋಟಿ ರೂ., ಬಂಡಿಹಳ್ಳಿ ರೋಡ್ ಗೇಟ್ ರಸ್ತೆ ಕೆಳ ಸೇತುವೆಗೆ 10.01 ಕೋಟಿ ರೂ., ಬೆಂಚಗೆರೆ ಗೇಟ್ ರಸ್ತೆ ಮೇಲ್ ಸೇತುವೆಗೆ 36.62 ಕೋಟಿ ರೂ. ಸೇರಿ ಒಟ್ಟು 60 ಕೋಟಿ ರೂ. ವೆಚ್ಚದ 3 ರೈಲ್ವೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.