ತುಮಕೂರು: ಇಬ್ಬರು ಪಿಡಿಒ ಹಾಗೂ ಓರ್ವ ಗ್ರೇಡ್ 2 ಕಾರ್ಯದರ್ಶಿಯನ್ನು ಅಮಾನತುಗೊಳಿಸಿ ಜಿಲ್ಲಾಪಂಚಾಯತ್ ಸಿಇಒ ಆದೇಶ ಹೊರಡಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕರ್ತವ್ಯಲೋಪ ಹಾಗೂ ಸರ್ಕಾರಿ ಅನುದಾನ ದುರುಪಯೋಗ ಮಾಡಿದ ಆರೋಪದಲ್ಲಿ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ. ತುಮಕೂರು ತಾಲೂಕಿನ ಹೆಗ್ಗೆ ಗ್ರಾಮ ಪಂಚಾಯತ್ ಪಿಡಿಒ ರಾಘವೇಂದ್ರ, ರಾಪ್ಟೆ ಗ್ರಾಮ ಪಂಚಾಯಿತಿ ಪಿಡಿಒ ಬಿ.ಎ ಹನುಮಂತರಾಜು ಹಾಗೂ ಗ್ರೇಡ್ 2 ಕರ್ಯದರ್ಶಿ ಹೆಚ್ ಸಿ ಹನುಮಂತರಾಜು ಸಸ್ಪೆಂಡ್ ಆದವರು.
ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಮೂವರನ್ನು ಅಮಾನತುಮಾಡಿ ಆದೇಶಹೊರಡಿಸಿದ್ದಾರೆ.