
ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಭಾವಿಸಿ ಪುತ್ರಿಯೇ ಸೋದರರೊಂದಿಗೆ ಸೇರಿ ತಾಯಿಯನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 26 ವರ್ಷದ ಯುವಕ ಮತ್ತು 21 ವರ್ಷದ ಯುವತಿಯನ್ನು ಬಂಧಿಸಿದ್ದಾರೆ.
ಜನವರಿ 30 ರಂದು ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ 45 ವರ್ಷದ ಸಾವಿತ್ರಮ್ಮ ಸಂಪ್ ಗೆ ಬಿದ್ದು ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೊರಟಗೆರೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಯುವಕ ಮತ್ತು ಯುವತಿ ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳಾಗಿದ್ದಾರೆ. ವರಸೆಯಲ್ಲಿ ಯುವಕನಿಗೆ, ಯುವತಿ ತಂಗಿಯಾಗುತ್ತಾಳೆ. ಇವರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರವಾಗಿ ಯುವತಿಯ ತಾಯಿ ಸಾವಿತ್ರಮ್ಮ ಮತ್ತು ಯುವಕನ ತಾಯಿ ಬುದ್ಧಿವಾದ ಹೇಳಿದ್ದರು.
ಬಳಿಕ ಇಬ್ಬರೂ ದೂರವಾದವರಂತೆ ಇದ್ದು, ನಂತರ ಮತ್ತೆ ಸಂಬಂಧ ಮುಂದುವರೆಸಿದ್ದಾರೆ. ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ತಾಯಿಯನ್ನೇ ಉಸಿರುಗಟ್ಟಿಸಿ ಸಂಪ್ ಗೆ ನೂಕಿ ಕೊಲೆ ಮಾಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಇಬ್ಬರನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.