
ತುಮಕೂರು: ತುಮಕೂರು ಸಿದ್ದಗಂಗಾ ಮಠದ ಬಳಿ ನೀರಿಗೆ ಬಿದ್ದು ನಾಲ್ವರು ಸಾವುಕಂಡಿದ್ದಾರೆ. ತಾಯಿ, ಇಬ್ಬರು ಮಕ್ಕಳು ಹಾಗೂ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಸಿದ್ದಗಂಗಾ ಮಠದ ಹಿಂಭಾಗದ ಗೋಕಟ್ಟೆಯಲ್ಲಿ ದುರಂತ ಸಂಭವಿಸಿದೆ. ದನಗಳು ನೀರು ಕುಡಿಸಲು ನಿರ್ಮಿಸಿದ ಹೊಂಡದಲ್ಲಿ ಕಾಲು ತೊಳೆಯಲು ಇಳಿದಿದ್ದ ಓರ್ವ ಬಾಲಕ ನೀರಿಗೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ಹೋಗಿ ತಾಯಿ ನೀರು ಪಾಲಾಗಿದ್ದಾರೆ. ತಾಯಿ ರಕ್ಷಿಸಲು ಹೋದ ಮತ್ತೊಬ್ಬ ಮಗ ಕೂಡ ನೀರು ಪಾಲಾಗಿದ್ದು, ಮೂವರನ್ನು ರಕ್ಷಿಸಲು ಹೋದ ಮಹದೇವಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.